ಕರಾವಳಿಪುತ್ತೂರು

ಬೆಳ್ಳಾರೆ: ದಿ.ಪ್ರವೀಣ್‌ ನೆಟ್ಟಾರು ಮನೆಯಲ್ಲಿ ಸ್ಮೃತಿ ದಿನ, ಪ್ರವೀಣ್‌ ಪುತ್ಥಳಿಗೆ ಶಾಸಕಿಯಿಂದ ಪುಷ್ಪ ನಮನ

237

ನ್ಯೂಸ್‌ನಾಟೌಟ್‌: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಇಂದಿಗೆ (ಜು.26 ) ಒಂದು ವರ್ಷವಾಗಿದ್ದು, ಈ ನಿಟ್ಟಿನಲ್ಲಿ ದಿ.ಪ್ರವೀಣ್‌ ನೆಟ್ಟಾರು ಅವರ ಮನೆಯಲ್ಲಿ ಸ್ಮೃತಿ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರವೀಣ್ ನೆಟ್ಟಾರು ತಂದೆ ಶೇಖರ ಪೂಜಾರಿ ದೀಪ ಬೆಳಗಿಸಿದರು. ಮನೆ ಸಮೀಪದಲ್ಲಿ ನಿರ್ಮಿಸಿರುವ ಪುತ್ಥಳಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಪ್ರವೀಣ್ ನೆಟ್ಟಾರು ತಾಯಿ, ಪತ್ನಿ ನೂತನ ನೆಟ್ಟಾರು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬೆಳ್ಳಾರೆ ಗ್ರಾಮಪಂಚಾಯತ್‌ ಅಧ್ಯಕ್ಷ ಚಂದ್ರಶೇಖರ ಪನ್ನೆ, ಯುವಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ತ್ ನಾಯಕ್‌, ಬೂಡಿಯಾರು ರಾಧಾಕೃಷ್ಣ ರೈ, ಮಹೇಶ್‌ ರೈ ಮೇನಾಲ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ್‌ ಕೇರ್ಪಳ, ಗ್ರಾಪಂ ಸುಬೋಧ್‌ ಶೆಟ್ಟಿ, ಗ್ರಾಪಂ ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ, ವಸಂತ ನಡುಬೈಲು, ಶ್ರೀನಾಥ ರೈ ಬಾಳಿಲ, ಪ್ರಸಾದ್‌ ಕಾಟೂರು, ದಿಲಿಪ್‌ ಉಪ್ಪಳಿಕೆ, ಲೋಕೇಶ್‌ ಬೆಳ್ಳಾರೆ, ಮನುದೇವ್‌ ಬರಮಲೆ, ಇಂದಿರಾ ಬಿ.ಕೆ., ಅಜಿತ್‌ ರಾವ್‌ ಕಿಲ್ಲಂಗೋಡಿ, ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

See also  ಲೈಂಗಿಕ ದೌರ್ಜನ್ಯ: ಶಿವಮೂರ್ತಿ ಶರಣರ ನ್ಯಾಯಾಂಗ ಬಂಧನ ವಿಸ್ತರಣೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget