ಕರಾವಳಿಪುತ್ತೂರುರಾಜಕೀಯ

ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ : ರಘುಪತಿ ಭಟ್

ನ್ಯೂಸ್ ನಾಟೌಟ್ ಪುತ್ತೂರು: ರಾಜ್ಯದಲ್ಲಿ ಮುಂದಿನ ದಿನಗಳಲ್ಲೂ ಬಿಜೆಪಿ ಸರ್ಕಾರದ ಆಡಳಿತ ಅನಿವಾರ್ಯವಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸುಸ್ತಿರ ಸರ್ಕಾರ ರಚಿಸಲಿದೆ ಎಂದು ಶಾಸಕ ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸಂಜೀವ ಮಠಂದೂರು ಅವರ ಅಭಿವೃದ್ಧಿ ಕಾರ್ಯವನ್ನು ನೆಚ್ಚಿ ಜನರು ಬಿಜೆಪಿಗೆ ಬೆಂಬಲ ನೀಡುತ್ತಾರೆ. ಅಲ್ಲದೇ ಬಿಜೆಪಿ ಕರಾವಳಿಯ ಎಲ್ಲಾ ಸೀಟುಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ. ಆ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಈಗಾಗಲೇ ಆಶ್ವಾಸನೆ ನೀಡಿದಂತೆ ರಾಷ್ಟ್ರೀಯ ವಿಚಾರಧಾರೆಗಳನ್ನು ತೆಗೆದು ಹಾಕುವ ಕೆಲಸ ಮಾಡಲಿದೆ. ಆದರೆ ಬಿಜೆಪಿ ಮಾತ್ರ ರಾಷ್ಟ್ರದ ಚಿಂತನೆಗಳೊಂದಿಗೆ ಮುನ್ನಡೆಯಲಿದೆ. ಈ ನಿಟ್ಟಿನಲ್ಲಿ ಜನತೆ ಬಿಜೆಪಿಯನ್ನು ಬೆಂಬಲಿಸಿಬೇಕು. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಮಂದಿರ ನಿರ್ಮಾಣವಾಗುವಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರಬೇಕು. ಹಾಗೆಯೇ ಹನುಮಂತನ ಜನ್ಮಸ್ಥಳ ಕರ್ನಾಟಕ ಇಲ್ಲಿಂದಲೇ ಉಡುಗೊರೆ ನೀಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದೇವೆ ಎಂದರು.

ಅಡ್ವೋಕೇಟ್‌ ಶ್ರೀಕಾಂತ್‌, ಪಿ.ಜಿ. ಜಗನ್ನಿವಾಸ್‌ ರಾವ್‌, ಪ್ರೇಮಲತಾ ರಾವ್‌ ಮತ್ತಿತರರಿದ್ದರು.

Related posts

ಸುಳ್ಯದಲ್ಲಿ ಮೋಡ ಕವಿದ ವಾತಾವರಣ, ಮಳೆ ಸಾಧ್ಯತೆ

ಅಪ್ಪು ಬಳಿಕ ಸ್ಪಂದನಾ ವಿಜಯ್ ರಾಘವೇಂದ್ರ ಅವರಿಗೂ ಹೃದಯಾಘಾತ!, ದೊಡ್ಮನೆಯಲ್ಲೇ ಇಬ್ಬರ ಬಲಿ ಪಡೆದ ಹಾರ್ಟ್ ಅಟ್ಯಾಕ್!

ಪುತ್ತೂರು: ರೈಲಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿ ಸಾವು, ಕೈ ಕಾಲು ಪೀಸ್..ಪೀಸ್ ಆದ ರೀತಿಯಲ್ಲಿ ಕಂಡು ಬಂದ ಮೃತದೇಹ