ಕರಾವಳಿಪುತ್ತೂರು

ಅನಾರೋಗ್ಯದಿಂದ ಮೃತಪಟ್ಟ ಮೆಸ್ಕಾಂ ಪವರ್ ಮ್ಯಾನ್ ಮನೆಗೆ ಶಾಸಕ ಅಶೋಕ್‌ ರೈ ಭೇಟಿ

248

ನ್ಯೂಸ್‌ ನಾಟೌಟ್‌ ಪುತ್ತೂರು: ಅನಾರೋಗ್ಯದಿಂದ ಮೃತಪಟ್ಟ ಮೆಸ್ಕಾಂ ಪವರ್‌ಮ್ಯಾನ್ ಅವರ ಮನೆಗೆ ಪುತ್ತೂರು ಶಾಸಕ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕುರಿಯ ಗ್ರಾಮದ ಇಡಬೆಟ್ಟು ಕುಂಡಕೋರಿ ನಿವಾಸಿ ಕುಂಡ ಮೇರ ಎಂಬವರ ಪುತ್ರ ಕುಂಬ್ರದಲ್ಲಿ ಮೆಸ್ಕಾಂ ಪವರ್‌ಮ್ಯಾನ್ ಆಗಿ ಕರ್ತವ್ಯದಲ್ಲಿದ್ದ ಉಮೇಶ್ ಕುಂಡಕೋರಿ (೪೨) ಅವರು ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಸೋಮವಾರ (ಜೂ. 12ರಂದು) ರಾತ್ರಿ ಮನೆಯೊಳಗೆ ಕುಸಿದು ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯ ವಿಷಯ ತಿಳಿದು ಮೃತರ ಮನೆಗೆ ಭೇಟಿ ನೀಡಿದ ಶಾಸಕರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಟುಂಬದ ಆಧಾರವಾಗಿದ್ದ ಉಮೇಶ್ ಅವರ ಸಾವಿನಿಂದ ಕುಟುಂಬ ಕಂಗಲಾಗಿದ್ದು, ಮಾನವೀಯ ನೆಲೆಯಲ್ಲಿ ಪುತ್ರನಿಗೆ ಮೆಸ್ಕಾಂನಲ್ಲಿ ಉದ್ಯೋಗ ಕೊಡಿಸುವಲ್ಲಿ ಅವಕಾಶಗಳಿದ್ದಲ್ಲಿ ಕೆಲಸ ಕೊಡಿಸುವುದಾಗಿ ಶಾಸಕರು ಕುಟುಂಬಕ್ಕೆ ಭರವಸೆ ನೀಡಿದರು. ಕಾಂಗ್ರೆಸ್ ಪ್ರಮುಖರಾದ ಶಿವರಾಮ ಆಳ್ವ, ಸನತ್ ಕುರಿಯ, ನೇಮಾಕ್ಷ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

See also  ಮಹಾವಿಷ್ಣು ಮೂರ್ತಿ ಒತ್ತೆಕೋಲಕ್ಕೆ ತರಕಾರಿ ಕೊಟ್ಟ ಮುಸ್ಲಿಂ ವ್ಯಾಪಾರಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget