ಕ್ರೀಡೆ/ಸಿನಿಮಾದೇಶ-ವಿದೇಶವೈರಲ್ ನ್ಯೂಸ್

ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ಕ್ರಿಕೆಟಿಗನ ನಿಶ್ಚಿತಾರ್ಥ..? ಯಾರಿಕೆ ಸಂಸದೆ..?

ನ್ಯೂಸ್ ನಾಟೌಟ್: ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ಕ್ರಿಕೆಟಿಗ ರಿಂಕು ಸಿಂಗ್ ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಭಾರತ ತಂಡದ ಕ್ರಿಕೆಟ್ ತಾರೆ ರಿಂಕು ಸಿಂಗ್ ವಿವಾಹದ ಕುರಿತು ಸುದ್ದಿಯೊಂದು ವ್ಯಾಪಕ ವೈರಲ್ ಆಗುತ್ತಿದ್ದು, ರಿಂಕು ಸಿಂಗ್ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದ ಮಚಿಲ್‌ ಶಹರ್‌ ನ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ರಿಂಕು ಸಿಂಗ್ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಇಬ್ಬರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಆದರೆ ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ವಿವಾಹ ಕುರಿತ ಈ ಸುದ್ದಿಯನ್ನು ಎರಡು ಕುಟುಂಬದವರು ಅಲ್ಲಗಳೆದಿದ್ದು, ರಿಂಕು ಸಿಂಗ್ ವಿವಾಹ ಕುರಿತು ಮಾತುಕತೆ ನಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಿಯಾ ಸರೋಜ್ ತಂದೆ ಹಾಗೂ ಸಮಾಜವಾದಿ ಪಕ್ಷದ ಮಾಜಿ ಸಂಸದ ತೂಫಾನಿ ಸರೋಜ್ ಎರಡು ಕುಟುಂಬಗಳ ನಡುವೆ ವಿವಾಹದ ಕುರಿತು ಮಾತುಕತೆ ನಡೆದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂತೆ ಇಲ್ಲಿಯವರೆಗೆ ಯಾವುದೇ ನಿಶ್ಚಿತಾರ್ಥ ನಡೆದಿಲ್ಲ. ಎಂಗೇಜ್​ಮೆಂಟ್ ಆದರೆ ಅದನ್ನು ಎಲ್ಲರಿಗೂ ತಿಳಿಸಲಾಗುವುದು ಎಂದಿದ್ದಾರೆ.

ಇನ್ನು ರಿಂಕು ಸಿಂಗ್​ಹೆಸರಿನ ಜೊತೆ ತಳುಕುಹಾಕಿಕೊಂಡಿರುವ ಪ್ರಿಯಾ ಸರೋಜ್ ಬಗ್ಗೆ ಹೇಳುವುದಾದರೆ, ಇವರು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸಂಸದೆಯಾಗಿದ್ದಾರೆ. ಕೇವಲ 25ನೇ ವಯಸ್ಸಿಗೆ ಸಂಸದರಾಗಿರುವ ಪ್ರಿಯಾ ಸರೋಜ್ ಅವರು ಬಿಜೆಪಿಯ ಹಿರಿಯ ನಾಯಕಿ ಬಿಪಿ ಸರೋಜ್ ಅವರನ್ನು ಸೋಲಿಸುವ ಮೂಲಕ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಕೀಲೆಯಾಗಿರುವ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ.

Click

https://newsnotout.com/2025/01/naxal-in-chattisghar-kannada-news-kidnap-the-local-people-s/
https://newsnotout.com/2025/01/kannada-news-bus-stop-rickshaow-driver-theft/
https://newsnotout.com/2025/01/software-engineer-arrested-kannada-news-viral-news-f/
https://newsnotout.com/2025/01/13-year-old-boy-got-abused-y-teacher-during-2016-to-2020/
https://newsnotout.com/2025/01/america-white-house-kannad-anews-8-year-jail-d/
https://newsnotout.com/2025/01/forest-department-investigation-kannada-news-5-to-6-hour/
https://newsnotout.com/2025/01/mangaluru-scooter-and-tempo-collision-kannada-news-man-nomore/
https://newsnotout.com/2025/01/darshan-thugudeepa-and-gang-kannada-news-supreme-court/
https://newsnotout.com/2025/01/imbran-khan-kannada-news-and-his-wife-got-sentence/

Related posts

ಪುತ್ತೂರು: ದೂರು ಕೊಟ್ಟರೂ ಪ್ರಿಯಕರನ ಕಾಟದಿಂದ ಯುವತಿಯನ್ನ ರಕ್ಷಿಸಲಾಗಲಿಲ್ಲ..! ಗೌರಿ ತಂಟೆಗೆ ಹೋಗಲ್ಲ ಅಂಥ ಪೊಲೀಸರ ಎದುರು ಮುಚ್ಚಳಿಕೆ ಬರದುಕೊಟ್ಟವನು ಮಾಡಿದ್ದೇನು..?

ಬೇಕಾಬಿಟ್ಟಿ ಫ್ರೀ ಟಿಕೆಟ್​ ಹರಿದು ಎಸೆಯುತ್ತಿದ್ದದ್ದೇಕೆ ಬಿಎಂಟಿಸಿ ಕಂಡೆಕ್ಟರ್! ಆ ಮಹಿಳೆಯಿಂದ ತಿಳಿಯಿತು ಕಂಡಕ್ಟರ್ ಕರ್ಮಕಾಂಡ! ಏನಿದು ಘಟನೆ?

ಲೆಜೆಂಡ್ರಿ ಗಾಯಕಿ ಆಶಾ ಭೋಸ್ಲೆ ಮೊಮ್ಮಗಳು ಚಿತ್ರರಂಗಕ್ಕೆ ಎಂಟ್ರಿ;ಗಾಯಕಿಯೂ ಆದ ಈಕೆಯ ಸೌಂದರ್ಯಕ್ಕೆ ಫಿದಾ ಆಗೋದು ಗ್ಯಾರಂಟಿ..!