ಕರಾವಳಿ

ಸಿಕ್ಕಿತು ನಾಪತ್ತೆಯಾದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಸುಳಿವು

ನ್ಯೂಸ್ ನಾಟೌಟ್: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಕಾಣೆಯಾಗಿ ಐದು ದಿನಗಳಾದರೂ ಇದುವರೆಗೂ ಆಕೆ ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆಯೂ ತನಿಖೆಯನ್ನು ಚುರುಕುಗೊಳಿಸಿದ್ದು ಆಕೆಯ ಪತ್ತೆಗೆ ಶತ ಪ್ರಯತ್ನ ನಡೆಸುತ್ತಿದೆ.

ಭಾರತಿಯವರು ಅ. 29 ರಂದು ದೂರದ ಸಂಬಂಧಿಯೊಂದಿಗೆ ಕಾರಿನಲ್ಲಿ ತೆರಳಿರುವುದು ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿದೆ. ಮೊಬೈಲ್ ಲೊಕೇಶನ್ ಆಧಾರದ ಮೇಲೆ ಇವರು ಬೆಂಗಳೂರಿಗೆ ತೆರಳಿರುವುದು ಗೊತ್ತಾಗಿದೆ. ಅಲ್ಲಿಂದ ಆಂಧ್ರ ಪ್ರದೇಶಕ್ಕೆ ತೆರಳಿರುವ ಬಗ್ಗೆಯೂ ಮಾಹಿತಿ ತಿಳಿದು ಬಂದಿದೆ. ಸದ್ಯ ಆಕೆ ಆಂಧ್ರಪ್ರದೇಶಕ್ಕೆ ಹೋಗಿರುವ ಮಾಹಿತಿ ಲಭಿಸಿರುವುದರಿಂದ ಪೊಲೀಸರ ತಂಡ ಅತ್ತ ಕಡೆ ಪ್ರಯಾಣ ಬೆಳೆಸಿದೆ ಎಂದು ಹೇಳಲಾಗುತ್ತಿದೆ. ಆಕೆ ಯಾವ ಕಾರಣಕ್ಕೆ ಅಲ್ಲಿಗೆ ಹೋಗಿದ್ದಾರೆ ಎನ್ನುವುದು ಇದುವರೆಗೆ ನಿಗೂಢವಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಹೊರ ಬೀಳುವ ನಿರೀಕ್ಷೆ ಇದೆ.

Related posts

ಅಡ್ಕಾರ್ ನಲ್ಲಿ ಬಳಿ ರಿಕ್ಷಾ- ಬೈಕ್ ಡಿಕ್ಕಿ, ಸವಾರರಲ್ಲಿ ಓರ್ವನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ರಾಜ್ಯ ಅಬಾಕಸ್ ಸ್ಪರ್ಧೆ: ಸುಳ್ಯ, ಪುತ್ತೂರು ವಿದ್ಯಾರ್ಥಿಗಳ ಭರ್ಜರಿ ಸಾಧನೆ, 12 ಪ್ರಶಸ್ತಿಗಳೊಂದಿಗೆ ಪ್ರಚಂಡ ಸಾಧನೆ ಮಾಡಿದ ಐ.ಆರ್.ಸಿ.ಎಂ.ಡಿ ವಿದ್ಯಾರ್ಥಿಗಳು

ಶೀಘ್ರದಲ್ಲೇ ಬೀಡಿ, ಸಿಗರೇಟ್‌ ನಿಷೇಧ..!