ಕರಾವಳಿಕ್ರೈಂ

ನ್ಯೂಸ್ ನಾಟೌಟ್ ವರದಿ ಮಾಡಿದ ಕೇವಲ 1 ಗಂಟೆಯಲ್ಲಿ ಬಾಲಕ ಪತ್ತೆ, ಬಾಲಕ ಸಿಕ್ಕಿದ್ದೆಲ್ಲಿ..?

ನ್ಯೂಸ್ ನಾಟೌಟ್: ಬಾಲಕನೋರ್ವ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಿಂದ ತಪ್ಪಿಸಿಕೊಂಡಿದ್ದ ಬಾಲಕ ಈಗ ಗುರುಪುರ ಕೈಕಂಬ ಬಿಸಿ ರೋಡ್ ಬಳಿ ಪತ್ತೆಯಾಗಿದ್ದಾನೆ. ನ್ಯೂಸ್ ನಾಟೌಟ್ ವರದಿ ಮಾಡಿದ ಕೇವಲ 1 ಗಂಟೆಯಲ್ಲಿ ಬಾಲಕ ಪತ್ತೆಯಾಗಿರುವುದು ವಿಶೇಷ.

ಸದ್ಯ ಅಲ್ಲಿಯ ಪೊಲೀಸರು ಮಡಂತ್ಯಾರಿಗೆ ಮಗುವನ್ನು ಕರೆದುಕೊಂಡು ಬರುತ್ತಿದ್ದಾರೆ. ಪೋಷಕರು ಇತ್ತ ಕಡೆಯಿಂದ ಮಡಂತ್ಯಾರು ಠಾಣೆಗೆ ಮಗುವನ್ನು ಕರೆದುಕೊಂಡು ಹೋಗುವುದಕ್ಕಾಗಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಉಸ್ಮಾನ್ ಅನ್ನುವವರ ಮಗ ಮಹಮ್ಮದ್ ಮೊಯಿನುದ್ದಿನ್ (14 ವರ್ಷ) ಮಧ್ಯಾಹ್ನ ವೇಳೆ 2.30 ರ ಸುಮಾರಿಗೆ ನಾಪತ್ತೆಯಾಗಿದ್ದ. ಪೋಷಕರು ಎಲ್ಲ ಕಡೆ ಹುಡುಕಾಟ ನಡೆಸಿದ್ದರು. ಗುರುವಾಯುನ ಕೆರೆ ಬಳಿ ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಬಾಲಕ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂದಿತ್ತು.

Related posts

ಧರ್ಮಸ್ಥಳ:ಕೊಕ್ಕಡದಲ್ಲಿ ಒಂಟಿ ಸಲಗ ಪ್ರತ್ಯಕ್ಷ,ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಮೊಬೈಲ್ ಗಾಗಿ 15 ರ ತಮ್ಮನನ್ನೇ ಸುತ್ತಿಗೆಯಿಂದ ಹೊಡೆದು ಕೊಂದ 18 ರ ಅಣ್ಣ..! ಮೊಬೈಲ್ ನಲ್ಲಿ ಅಂತದ್ದೇನಿತ್ತು..?

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆ, ಕಾಲೇಜಿಗೆ ನಾಳೆ(ಜು.18) ರಜೆ, ಎಲ್ಲೆಲ್ಲಿ ರಜೆ..? ಇಲ್ಲಿದೆ ಡಿಟೇಲ್ಸ್