Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಪ್ರಚಾರಕ್ಕಾಗಿ ‘ಆಪರೇಷನ್ ಸಿಂದೂರ್’ ವಿಷಯ ಬಳಸಿಕೊಂಡ ವೈದ್ಯ ಅಮಾನತ್ತು..! ತನಿಖೆಗೆ ಸಮಿತಿ ರಚಿಸಿದ ಆಸ್ಪತ್ರೆ..!

1.7k

ನ್ಯೂಸ್‌ ನಾಟೌಟ್: ‘ಆಪರೇಷನ್ ಸಿಂದೂರ’ ಬಗ್ಗೆ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಬಳಸಿದ್ದ “ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂಬ ಸಾಲನ್ನು, ಛತ್ತೀಸ್‌ ಗಢದ ವೈದ್ಯರೊಬ್ಬರು ತಮ್ಮ ವೃತ್ತಿಪರ ಸೇವೆಗಳನ್ನು ಪ್ರಚಾರ ಮಾಡಲು ಬಳಸಿ ವಿವಾದಕ್ಕೊಳಗಾಗಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ನಂತರ, ಭಿಲಾಯಿ ಮೂಲದ ಮೂತ್ರಶಾಸ್ತ್ರಜ್ಞ ವೈದ್ಯ ರನ್ನು ಅಶಿಸ್ತಿನ ಕಾರಣಕ್ಕೆ ಅಮಾನತ್ತುಗೊಳಿಸಲಾಗಿದೆ. ಶ್ರೀ ಶಂಕರಾಚಾರ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಶಿವೇಂದ್ರ ಸಿಂಗ್ ತಿವಾರಿ ಅವರು ಅಮಾನತ್ತುಗೊಂಡ ವೈದ್ಯ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈದ್ಯಕೀಯ ಕ್ಲಿನಿಕ್ ನ ಪ್ರಚಾರದ ಭಾಗವಾಗಿ ಅವರು ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ನಲ್ಲಿ ಆತ ಪ್ರಧಾನಿಯವರ ಹೇಳಿಕೆಯನ್ನು ಜಾಣತನದಿಂದ ಪೋಣಿಸಿದ್ದಾರೆ. “ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಆದ್ದರಿಂದ ನೀವು ನಿಮ್ಮ ಮೂತ್ರದಲ್ಲಿ ರಕ್ತವನ್ನು ನೋಡಿದರೆ, ತಕ್ಷಣ ಮೂತ್ರಶಾಸ್ತ್ರಜ್ಞರನ್ನು ಸಂಪರ್ಕಿಸಿ. ಅದು ಗಂಭೀರವಾಗಿರಬಹುದು,” ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

‘ಆಪರೇಷನ್ ಸಿಂದೂರ್’ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಾಡಿದ್ದ ಉಲ್ಲೇಖವನ್ನು ಬಳಸಿರುವುದು ಅವರಿಗೆ ಉರುಳಾಗಿ ಪರಿಣಮಿಸಿದೆ. ಈ ಬಗ್ಗೆ ತನಿಖೆ ನಡೆಸಲು ಆಸ್ಪತ್ರೆಯು ಉನ್ನತ ಸಮಿತಿಯನ್ನು ರಚಿಸಿದೆ. ವೈದ್ಯರನ್ನು 15 ದಿನಗಳವರೆಗೆ ಅಮಾನತ್ತುಗೊಳಿಸಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಜಾಹೀರಾತು ಮೂತ್ರಶಾಸ್ತ್ರದ ಆರೋಗ್ಯವನ್ನು ಉತ್ತೇಜಿಸುವ ಪ್ರಯತ್ನವಾಗಿದೆ. ವೈದ್ಯರು ರೋಗಿಗಳ ವೃತ್ತಿಪರ ಆರೈಕೆಯನ್ನು ವಿಸ್ತರಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಬಹುದು. ಆದರೆ ಪ್ರಧಾನ ಮಂತ್ರಿಯವರ ಹೇಳಿಕೆಯನ್ನು ಸ್ವಯಂ ಪ್ರಚಾರಕ್ಕಾಗಿ ಬಳಸುವುದು ನ್ಯಾಯಸಮ್ಮತವಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

ಖ್ಯಾತ ಗಾಯಕಿ ಅರ್ಚನಾ ಉಡುಪ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರಾ..? ಈ ಬಗ್ಗೆ ಆಕೆ ಹೇಳಿದ್ದೇನು..?

ಅಮೆರಿಕದಲ್ಲಿ ಬಿರುಗಾಳಿಯ ಅಬ್ಬರಕ್ಕೆ 35ಕ್ಕೂ ಹೆಚ್ಚು ಮಂದಿ ಬಲಿ..! 5,000ಕ್ಕೂ ಹೆಚ್ಚು ಕಟ್ಟಡಗಳು ನೆಲಸಮ

See also  ಹೊಸ ಸೇತುವೆಯ ಮೇಲೆ ಲಾಂಗ್ ಹಿಡಿದು ಆಟವಾಡಿದ ಕಿಡಿಗೇಡಿಗಳು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget