ನ್ಯೂಸ್ ನಾಟೌಟ್: ನಡು ರಸ್ತೆಯಲ್ಲಿ ಸಿನಿಮಾಕ್ಕಿಂತಲೂ ಭೀಭತ್ಸವಾಗಿ ಕೊ*ಲೆ ಮಾಡುವ ದೃಶ್ಯವನ್ನು ರೀಲ್ಸ್ ಮಾಡುತ್ತಿದ್ದ ವಿಡಿಯೋ ವೈರಲ್ ಆದ ಬಳಿಕ ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ನಗರ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ನಡು ರಸ್ತೆಯಲ್ಲಿ ಕೊಲೆ ಮಾಡುವ ದೃಶ್ಯದಲ್ಲಿ ನಟಿಸಿ ಕೂಗಾಡಿದ್ದ ಇಬ್ಬರು ಈಗ ಜೈಲು ಸೇರಿದ್ದಾರೆ. ಈ ದೃಶ್ಯವನ್ನು ರಾತ್ರಿ ಹೊತ್ತಿನಲ್ಲಿ ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಸೆರೆ ಹಿಡಿಯಲಾಗಿತ್ತು. ಅದಕ್ಕೆ ಆಟೋ ಮತ್ತು ಇತರೆ ವಾಹನಗಳ ಲೈಟ್ ಗಳನ್ನು ಬಳಕೆ ಮಾಡಲಾಗಿತ್ತು.
ಸೋಮವಾರ(ಮಾ.17) ತಡರಾತ್ರಿಯಿಂದ ಬೆಳಗಿನ ಜಾವದ ಅವಧಿಯಲ್ಲಿ ನಡುರಸ್ತೆಯಲ್ಲಿ ಸುತ್ತಿಗೆ ಹಿಡಿದು ವ್ಯಕ್ತಿಯೊಬ್ಬನ ಎದೆ ಮೇಲೆ ಕುಳಿತ ಮತ್ತೂಬ್ಬ ಭೂಪ ಆತನನ್ನು ಕೊಲೆ ಮಾಡಿ ರಕ್ತಸಿಕ್ತವಾದ ದೇಹದ ಮೇಲೆ ಕೇಕೆ ಹಾಕುತ್ತಿದ್ದ ದೃಶ್ಯದ ವಿಡಿಯೋ ವೈರಲ್ ಆಗಿ ನಗರ ಜನತೆ ಬೆಚ್ಚಿಬೀಳುವಂತೆ ಮಾಡಿತ್ತು.
ಸಚಿನ್ ಹಾಗೂ ಸಾಯಬಣ್ಣ ಇಬ್ಬರು ಸೇರಿಕೊಂಡು “ಮೆಂಟಲ್ ಮಜನು’ ಎನ್ನುವ ಹೆಸರಿನ ಶಾರ್ಟ್ ಮೂವಿ ಮಾಡುತ್ತಿದ್ದಾರೆ. ಇದಕ್ಕಾಗಿ ಇವರು ಸೋಮವಾರ ತಡರಾತ್ರಿ ನಗರದ ಹುಮನಾಬಾದ ರಿಂಗ್ ರಸ್ತೆಯ ನಟ್ಟ ನಡು ರಸ್ತೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದು ಕೊಲೆ ದೃಶ್ಯವೊಂದರ ಶೂಟ್ ಮಾಡುತ್ತಿದ್ದರು. ಸಚಿನ್ ಹಾಗೂ ಸಾಯಬಣ್ಣ ರಕ್ತದ ಮಾದರಿಯಲ್ಲಿ ಕೆಂಪು ಬಣ್ಣವೊಂದನ್ನು ಹಚ್ಚಿಕೊಂಡು ಅರೆ ಬೆತ್ತಲೆಯಾಗಿ ರಕ್ತಸಿಕ್ತ ದೇಹದ ಮೇಲೆ ಕುಳಿತು ವ್ಯಕ್ತಿಯೊಬ್ಬ ಕೈಯಲ್ಲಿ ಸುತ್ತಿಗೆ ಹಿಡಿದುಕೊಂಡು ಕೊಲೆ ಮಾಡಿ ಜೋರಾಗಿ ಕೂಗಾಡುವ ದೃಶ್ಯವೊಂದನ್ನು ಚಿತ್ರೀಕರಿಸಿದ್ದರು.
ಅವರು ಚಿತ್ರಿಕರಿಸಿದ ವಿಡಿಯೋ ಬೇರೊಬ್ಬರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದರು ಎನ್ನಲಾಗಿದೆ. ರಾತ್ರಿಯಿಂದಲೇ ಎಲ್ಲರ ಮೊಬೈಲ್‌ಗಳಲ್ಲಿ ಹರಿದಾಡಿದೆ. ಬೆಳಗಾಗುವುದರೊಳಗಾಗಿ ರಿಂಗ್ ರಸ್ತೆಯಲ್ಲಿ ಭೀಕರ ಕೊಲೆ ನಡೆದಿದೆ ಎಂದು ಎಲ್ಲರೂ ಭಾವಿಸಿದ್ದರು. ವಿಡಿಯೋಪೊಲೀಸರ ಕೈಗೆ ಸಿಕ್ಕ ತಕ್ಷಣ ಎಚ್ಚೆತ್ತುಕೊಂಡ ಸಬ್ ಅರ್ಬನ್ ಠಾಣೆಯ ಪೊಲೀಸರು ಈ ರೀತಿ ವಿಡಿಯೋ ಚಿತ್ರೀಕರಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದ ಕಾರಣಕ್ಕಾಗಿ ಸಚಿನ್ ಹಾಗೂ ಸಾಯಬಣ್ಣ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ:ಪೊಲೀಸ್ ಠಾಣೆಯಲ್ಲೇ ಜೂಜಾಟದಲ್ಲಿ ತೊಡಗಿದ್ದ ಪೊಲೀಸರು..! ಐವರು ಅಮಾನತ್ತು..!