Latestಕ್ರೈಂವೈರಲ್ ನ್ಯೂಸ್

3 ವರ್ಷದ ಮಗುವಿನ ಮೇಲೆ ಮನೆ ಮಾಲೀಕನ ಮಗನಿಂದ ಅತ್ಯಾಚಾರ..! ಆ ಮಗುವಿನ ಕುಟುಂಬ ಆರೋಪಿಯ ಮನೆಯಲ್ಲಿ ಬಾಡಿಗೆಗಿದ್ದರು..!

706

ನ್ಯೂಸ್ ನಾಟೌಟ್: ಮೂರು ವರ್ಷದ ಮಗುವಿನ ಮೇಲೆ ಮನೆ ಮಾಲೀಕನ ಮಗ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ​ನಲ್ಲಿ ನಡೆದಿದೆ.

ಇಬ್ಬರೂ ಚಾಕೊಲೇಟ್​ ಕೊಡಿಸುವುದಾಗಿ ನಂಬಿಸಿ ಕಾರಿನಲ್ಲಿ ಕರೆಸೊಯ್ದು ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಈ ಘಟನೆ ಗ್ವಾಲಿಯರ್‌ ನ ದಾಬ್ರಾ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೋನಿಯಲ್ಲಿ ನಡೆದಿದೆ. ಆ ಮಗುವಿನ ಕುಟುಂಬ ಆರೋಪಿಯ ಮನೆಯಲ್ಲಿ ಬಾಡಿಗೆದ್ದರು.

ಆರೋಪಿಗಳಲ್ಲಿ ಒಬ್ಬ ಮನೆ ಮಾಲೀಕನ ಮಗ, ಮಾಹಿತಿ ಪ್ರಕಾರ ಇಬ್ಬರು ಹುಡುಗರು ಬಾಲಕಿಗೆ ಚಾಕೊಲೇಟ್​ ಕೊಟ್ಟು ಕಾರಿನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ. ಕಾರಿನೊಳಗೆ ಅವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಆ ಮಗುವಿನ ಬಳಿ ಮನೆಯಲ್ಲಿ ಯಾರಿಗೂ ಏನೂ ಹೇಳಬೇಡ ಎಂದು ಹೇಳಿ ಮನೆಯ ಬಳಿ ಬಿಟ್ಟು ಹೋಗಿದ್ದಾರೆ. ಆದರೆ, ಹುಡುಗಿ ತನ್ನ ತಾಯಿಗೆ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾಳೆ. ನಂತರ ಆಕೆಯ ಪೋಷಕರು ನೇರವಾಗಿ ದಾಬ್ರಾ ನಗರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಬ್ಬರೂ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಮತ್ತು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಹಲವಾರು ಪೊಲೀಸ್ ತಂಡಗಳನ್ನು ರಚಿಸಿ ಘಟನೆ ನಡೆದ ವಿವಿಧ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

See also  ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ವಾರಸುದಾರರಿಗಾಗಿ ಹುಡುಕಾಟ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget