ವಿಡಿಯೋವೈರಲ್ ನ್ಯೂಸ್

ರೆಸ್ಟೋರೆಂಟ್‌ನಲ್ಲಿ ಅನುಚಿತವಾಗಿ ವರ್ತಿಸಿದ ಯುವಕರ ಮೇಲೆ ದಾಳಿ ಮಾಡಿ ಹಿಮ್ಮೆಟ್ಟಿಸಿದ ದಿಟ್ಟ ಮಹಿಳೆ! ಇಲ್ಲಿದೆ ವೈರಲ್ ವಿಡಿಯೋ!

ನ್ಯೂಸ್ ನಾಟೌಟ್: ಹೋಟೆಲ್ ಸೇವಕಿಯೊಬ್ಬಳು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಇಬ್ಬರು ಗ್ರಾಹಕರೊಂದಿಗೆ ಜಗಳವಾಡಿದ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಆ ವಿಡಿಯೋ ಕ್ಲಿಪ್ ನಲ್ಲಿ ಮಹಿಳೆಯ ಸಮರ ಕಲೆಯ ಕೌಶಲ್ಯವು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ವೈರಲ್ ಆಗಿರುವ ಸಿಸಿಟಿವಿ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಆ ಕಿರು ವಿಡಿಯೋದಲ್ಲಿ ಒಬ್ಬ ಮಹಿಳೆ ಇಬ್ಬರು ಪುರುಷರಿಗೆ ಆಹಾರ ನೀಡುತ್ತಿದ್ದು, ಅಷ್ಟರಲ್ಲಿ ಒಬ್ಬಾತ ಎದ್ದು ಮಹಿಳೆಯನ್ನು ತಳ್ಳಲು ಶುರು ಮಾಡುತ್ತಾನೆ. ಅಲ್ಲಿ ಒಬ್ಬಾತ ತನ್ನ ಮೇಲೆ ಕುರ್ಚಿ ಎಸೆದು ಪ್ರತೀಕಾರ ತೀರಿಸಿಕೊಂಡಾಗ ಆಕೆ ತೋರಿದ ಕೌಶಲ್ಯ ನಿಜಕ್ಕೂ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋವನ್ನು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡಿದಿದೆ. ಟ್ವಿಟರ್ ಬಳಕೆದಾರರು ಕಾಮೆಂಟ್‌ಗಳ ಮೂಲಕ ಮಹಿಳೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಇಬ್ಬರು ಗ್ರಾಹಕರೊಂದಿಗೆ ಜಗಳವಾಡಿದ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

Related posts

ಮನೆಯೊಳಗೆ ತಾಯಿ-ಮಕ್ಕಳ ನಿಗೂಢ ಸಾವು..! ಆಕೆಯ ಪತಿ ಬಿಚ್ಚಿಟ್ಟ ರಹಸ್ಯವೇನು..?

ಕೊರಿಯಾದ ವ್ಲಾಗರ್‌ ಜೊತೆ ಅಸಭ್ಯವಾಗಿ ವರ್ತಿಸಿದ್ನಾ ಈ ವ್ಯಕ್ತಿ..? ಆಕೆ ವಿಡಿಯೋದಲ್ಲಿ ಹೇಳಿದ್ದೇನು? ಆರೋಪಿ ಅರೆಸ್ಟ್..!

ದೇವರು ಕೊಡುವ ಬದಲು ಪೂಜಾರಿಯೇ ವರ ಕೊಟ್ಟ..! ಮಕ್ಕಳಾಗಿಲ್ಲ ಎಂದು ದೇವರ ಬಳಿ ಬಂದವಳು ಪೂಜಾರಿ ಜೊತೆಯೇ ಎಸ್ಕೇಪ್! ಏನಿದು ರೋಚಕ ಸ್ಟೋರಿ?