ಬೆಂಗಳೂರು: ಇತ್ತೀಚೆಗೆ ಆನ್ಲೈನ್ನಲ್ಲಿ ಓರಿಯೋ- ಪಕೋಡಾ, ಚಾಕಲೇಟ್ ಮ್ಯಾಗಿ ಮೊದಲಾದ ರೆಸಿಪಿಗಳು ನಿಮ್ಮ ಗಮನ ಸೆಳೆದಿರಬಹುದು. ಇದೀಗ ‘ಮಿರಿಂಡಾ- ಗೋಲ್ಗಪ್ಪ’ ಸರದಿ. ಹೌದು. ಸಾಮಾನ್ಯವಾಗಿ ನಾವು ಗೋಲ್ಗಪ್ಪವನ್ನು ಬೇಯಿಸಿದ ಆಲೂಗೆಡ್ಡೆ, ಈರುಳ್ಳಿ ಮೊದಲಾದವನ್ನು ಹದವಾಗಿ ಬೆರೆಸಿ ತಯಾರಿಸಿದ ರುಚಿಕರ ಮಿಶ್ರಣವನ್ನು ಖಡಕ್ ಪಾನಿಯೊಂದಿಗೆ ಸೇವಿಸಿ ಬಾಯಿ ಚಪ್ಪರಿಸುತ್ತಿದ್ದೆವು. ಆದರೆ ಈಗ ಇದರಲ್ಲೇ ಹೊಸದನ್ನು ಆಹಾರ ಪ್ರಿಯರು ಪ್ರಯತ್ನಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ @chatore_broothers ಎಂಬ ಖಾತೆಯಿಂದ ಜೈಪುರದಲ್ಲಿ ಸೆರೆಹಿಡಿಯಲಾದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಅದರಲ್ಲಿ ಮಿರಿಂಡಾ- ಗೋಲ್ಗಪ್ಪ ತಯಾರಿಸಲಾಗಿದೆ. ವಿಡಿಯೋದಲ್ಲಿ ಮಿರಿಂಡಾವನ್ನು ಪಾನಿಯ ಬದಲಿ ಪಾತ್ರೆಯಲ್ಲಿ ಹಾಕುವುದನ್ನು ಕಾಣಬಹುದು. ನಂತರ ಅದರಿಂದಲೇ ಗೋಲ್ಗಪ್ಪ ತಯಾರಿಸಿ, ನೀಡಲಾಗಿದೆ.