ಇಂಪಾಲ್: ಮೀರಾ ಬಾಯಿ ಚಾನು ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಒಂದು ಕ್ಷಣಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಅವರು ಶಿಸ್ತಿನ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದರು ಅನ್ನುವುದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. ನಿತ್ಯ ಶ್ರಮದ ರಹದಾರಿಯೊಂದೇ ದಾರಿ ಅನ್ನುವುದನ್ನು ಅವರು ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದರು. ಫಿಟ್ನೆಸ್ ಕಾಯ್ದುಕೊಳ್ಳುವುದಕ್ಕಾಗಿ ಮೀರಾ ಬಾಯಿ ಮನೆ ಊಟವನ್ನೇ ತೊರೆದಿದ್ದರು. ನೆಚ್ಚಿನ ಅಮ್ಮನ ಕೈತುತ್ತನ್ನು ಮಿಸ್ ಮಾಡಿಕೊಂಡಿದ್ದರು. ಎಲ್ಲವನ್ನು ದೇಶಕ್ಕಾಗಿ ಮಾಡಿದ್ದರು.
ಈ ವಿಷಯವನ್ನು ಸ್ವತಃ ಮೀರಾ ಬಾಯಿ ಚಾನು ಅವರೇ ಹೇಳಿಕೊಂಡಿದ್ದಾರೆ. ಮಣಿಪುರಕ್ಕೆ ಬಂದವರೇ ಹೊಟ್ಟೆ ತುಂಬಾ ಅನ್ನ, ಇಷ್ಟವಾದ ತಿಂಡಿ, ಪಾಯಸ ಎಲ್ಲವನ್ನೂ ಮನಸೋ ಇಚ್ಚೆ ಮೀರಾ ಅಮ್ಮನ ಕೈನಿಂದ ಮಾಡಿಸಿಕೊಂಡು ತಿಂದಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಅವರು ಫೋಟೋ ಪ್ರಕಟಿಸಿದ್ದಾರೆ. ಎರಡು ವರ್ಷದಿಂದ ನಾನು ಮನೆ ಊಟವನ್ನೇ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.