Uncategorized

ದುಗಲಡ್ಕ: ರಾತ್ರಿ ವೇಳೆ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ

ನ್ಯೂಸ್ ನಾಟೌಟ್: ಸುಳ್ಯ ಜಾತ್ರೆಗೆ ಬಂದು ಸಂಬಂಧಿಕರೊಂದಿಗೆ ಗುತ್ತಿಗಾರಿಗೆ ತೆರಳಿದ್ದ ಅಪ್ರಾಪ್ತ ಬಾಲಕಿ ಮೇಲೆ ಗುತ್ತಿಗಾರಿನ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು ಆತ ಜೈಲುಪಾಲಾಗಿದ್ದಾನೆ ಎಂದು ತಿಳಿದು ಬಂದಿದೆ.

ದುಗಲಡ್ಕ ಭಾಗದ ಅಪ್ರಾಪ್ತ ಬಾಲಕಿ ಜ.11 ರಂದು ಸುಳ್ಯ ಜಾತ್ರೆಗೆ ಸಂಬಂಧಿಕರೊಂದಿಗೆ ತೆರಳಿದ್ದವಳು. ಅಲ್ಲಿಂದ ತನ್ನ ಸಂಬಂಧಿಕರೊಂದಿಗೆ ಆಕೆ ಗುತ್ತಿಗಾರಿಗೆ ತೆರಳಿದ್ದಾಳೆ. ಈ ವೇಳೆ ಅಲ್ಲಿಯ ಸಂಬಂಧಿ ಜಯಪ್ರಕಾಶ್ ಎಂಬಾತ ಬಾಲಕಿಯನ್ನು ರಾತ್ರಿಯ ವೇಳೆ ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ತಿಳಿದು ಬಂದಿದೆ. ಸ್ವತಃ ಈ ಬಗ್ಗೆ ಬಾಲಕಿಯ ತಂದೆ ಆ.21 ರಂದು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರು. ಸುಬ್ರಹ್ಮಣ್ಯ ಪೊಲೀಸರು ಜಯಪ್ರಕಾಶ್ ನನ್ನು ಬಂಧಿಸಿ ವಿಚಾರಿಸಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈಗ ಆತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.

Related posts

ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ: ಸಿಎಂ ಸಭೆಯಲ್ಲಿ ತೀರ್ಮಾನ

ಅಪ್ಪನ ಧ್ವನಿ ಕೇಳುತ್ತಿದ್ದಂತೆ ಬಿಕ್ಕಿ-ಬಿಕ್ಕಿ ಅತ್ತ ಡ್ರೋಣ್ ಪ್ರತಾಪ್..! ಬಿಗ್ ಬಾಸ್ ಮನೆಯಲ್ಲಿ ಕಣ್ಣೀರ ಕೋಡಿ,3 ವರ್ಷದಿಂದ ಮನೆಯವರಿಂದ ಪ್ರತಾಪ್ ದೂರವಾಗಿದ್ದೇಕೆ..?

ಚಾಕ್ಲೇಟ್‌ನಲ್ಲಿ ಗಾಂಜಾ, ತಿನ್ನುವ ಮೊದಲು ಹುಷಾರ್‌..!