ನ್ಯೂಸ್ ನಾಟೌಟ್: ಅಪ್ರಾಪ್ತೆ ಮಗಳ ಮೇಲೆ ಚಿಕ್ಕಪ್ಪನಿಂದಲೇ ಅತ್ಯಾಚಾರ ನಡೆದು ಇದೀಗ ಆಕೆ ಗರ್ಭಿಣಿ ಆಗಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. ಈ ಸಂಬಂಧ ಕಾಮುಕ ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ನಂಜುಂಡಸ್ವಾಮಿ ಅತ್ಯಾಚಾರವೆಸಗಿದ ಚಿಕ್ಕಪ್ಪ ಆಗಿದ್ದು, ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿಯನ್ನು ಮನೆಗೆ ಕರೆದುಕೊಂಡು ಬಂದು ಅತ್ಯಾಚಾರ ಎಸಗಿದ್ದಾನೆ. ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 10ನೇ ತರಗತಿ ಓದುತ್ತಿದ್ದ ಅಪ್ರಾಪ್ತೆ ಮೇಲೆ ಈ ಕೃತ್ಯವೆಸಗಿದ್ದು, ಹೊಟ್ಟೆ ನೋವಿದೆ ಎಂಬ ಕಾರಣಕ್ಕೆ ಬಾಲಕಿಯನ್ನ ವೈದ್ಯರ ಬಳಿ ಕರೆದುಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಕಳೆದ ಜನವರಿಯಲ್ಲಿ ವಿದ್ಯಾರ್ಥಿನಿಯನ್ನ ಪುಸಲಾಯಿಸಿ ಮನೆಗೆ ಕರೆತಂದಿದ್ದ ಕಾಮುಕ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ಯಾರಿಗೂ ತಿಳಿಸಬಾರದೆಂದು ತಿಳಿಸಿ ಅಮಾಯಕನಂತೆ ಮತ್ತೆ ಶಾಲೆಗೆ ಬಿಟ್ಟಿದ್ದಾನೆ. ವೈದ್ಯರ ಬಳಿ ತೆರಳಿ ಪರಿಶೀಲಿಸಿದಾಗ ಆಕೆ 6 ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.
View this post on Instagram