Latestಕ್ರೈಂರಾಜ್ಯವೈರಲ್ ನ್ಯೂಸ್

ಅಪ್ರಾಪ್ತ ಆಟೋ ಚಲಾಯಿಸಿ ಅಪಘಾತ, ಪ್ರಾಧ್ಯಾಪಕ ಸಾವು..! ಆಟೋ ರಿಕ್ಷಾ ಮಾಲೀಕನಿಗೆ 1.41 ಕೋಟಿ ರೂ. ದಂಡ..!

1.1k

ನ್ಯೂಸ್ ನಾಟೌಟ್: ಅಪ್ರಾಪ್ತನಿಗೆ ಆಟೋ ಚಲಾಯಿಸಲು ಕೊಟ್ಟ ಪರಿಣಾಮ ಅಪಘಾತವಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹೀಗಾಗಿ ಆಟೋ ಮಾಲೀಕನಿಗೆ 1,41,61,580 ರೂ. ದಂಡ ವಿಧಿಸಿ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯ ಆದೇಶಿಸಿದೆ.

2021ರ ಮಾ.10ರಂದು ಯಲಬುರ್ಗಾ ಪಟ್ಟಣದಲ್ಲಿ ಆಟೋ ಮಾಲೀಕನೊಬ್ಬ 12 ವರ್ಷದ ಅಪ್ರಾಪ್ತನ ಕೈಗೆ ಆಟೋ ಚಲಾಯಿಸಲು ಕೊಟ್ಟಿದ್ದರ ಪರಿಣಾಮ ಅಪಘಾತ ನಡೆದಿತ್ತು. ಅಂಗಡಿಯೊಂದರ ಬಳಿ ಮೊಬೈಲ್‌ ನಲ್ಲಿ ಮಾತನಾಡುತ್ತಾ ನಿಂತಿದ್ದ ವ್ಯಕ್ತಿಗೆ ಅಪ್ತಾಪ್ರ ಆಟೋದಿಂದ ಡಿಕ್ಕಿ ಹೊಡೆದಿದ್ದ. ಅಪಘಾತದಲ್ಲಿ ಕೊಪ್ಪಳದ ಯಲಬುರ್ಗಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗಂಗಾವತಿ ನಿವಾಸಿ ರಾಜಶೇಖರ ಪಾಟೀಲ್ ಸಾವನ್ನಪ್ಪಿದ್ದರು.

ಇಂದು(ಎ.23) ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಎಸ್.ಗಾಣಿಗೇರ ಅಪ್ರಾಪ್ತನಿಗೆ ಆಟೋ ಚಲಾಯಿಸಲು ನೀಡಿದ್ದ ಮಾಲೀಕನಿಗೆ 1,41,61,580 ರೂ. ದಂಡ ವಿಧಿಸಿದ್ದಾರೆ. ದಂಡ ಮೊತ್ತವನ್ನು ರಾಜಶೇಖರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ಸೂಚಿಸಿದ್ದಾರೆ.  

ಮಂಗಳೂರು: ಶಾಲಾ ಕಾಲೇಜು ಬೇಸಿಗೆ ರಜೆ ಹಿನ್ನೆಲೆ ಕೆಲ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ

See also  ಶಾಲೆಯ ಈ ಬೆಂಚ್‌ನಲ್ಲಿ ಕುಳಿತ ತಕ್ಷಣ ಬಾಲಕಿಯರಿಗೆ ಕರೆಂಟ್‌ ಶಾಕ್‌..! ಜೋರಾಗಿ ಬೊಬ್ಬೆ ಹೊಡೆಯುತ್ತಿದ್ದಂತೆ ಕರೆಂಟ್‌ ಆಫ್‌..! ಈ ವಿಚಿತ್ರದಿಂದ ನೊಂದು ಬಾಲಕಿಯರು ಮಾಡಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget