ಕ್ರೈಂವೈರಲ್ ನ್ಯೂಸ್

ಶಾಸಕನ ಕೆನ್ನೆಗೆ ಬಾರಿಸಿದ ಮಹಿಳೆ..! ನದಿ ಪ್ರವಾಹದಿಂದ ರೊಚ್ಚಿಗೆದ್ದ ಮಹಿಳೆಯ ವಿಡಿಯೋ ವೈರಲ್

193

ನ್ಯೂಸ್ ನಾಟೌಟ್ : ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ ಜೆಜೆಪಿ ಶಾಸಕ ಈಶ್ವರ್‌ ಸಿಂಗ್‌ ಗೆ ಪ್ರವಾಹದಿಂದ ಬೇಸತ್ತ ಮಹಿಳೆಯೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ಹರಿಯಾಣದ ಗುಹ್ಲಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಭಾರಿ ಮಳೆಯಿಂದಾಗಿ ಘಗ್ಗರ್ ನದಿಯು ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಭಾಟಿಯಾ ಗ್ರಾಮದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದೇ ವೇಳೆ ಪರಿಸ್ಥಿತಿ ವೀಕ್ಷಣೆಗೆ ಬಂದ ಸಿಂಗ್‌ ಅವರ ಮೇಲೆ ಮಹಿಳೆ ಹ* ಲ್ಲೆ ಮಾಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಿಂಗ್‌, ‘ಪರಿಸ್ಥಿತಿ ಅವಲೋಕನ ಸಲುವಾಗಿ ಗ್ರಾಮಕ್ಕೆ ಹೋಗಿದ್ದೆ. ಮಹಿಳೆ ಮತ್ತು ಕೆಲವರು ಸಣ್ಣ ಅಣೆಕಟ್ಟೆ ಒಡೆದದ್ದರಿಂದಲೇ ತಮ್ಮ ಗ್ರಾಮ ಜಲಾವೃತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು’

‘ನೀವು ಪ್ರಯತ್ನಿಸಿದ್ದರೆ ಅಣೆಕಟ್ಟು ಒಡೆಯುತ್ತಿರಲಿಲ್ಲ ಎಂದು ಮಹಿಳೆ ಹೇಳಿದರು. ಆದರೆ, ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಇದು ಪ್ರಾಕೃತಿಕ ವಿಕೋಪವೆಂದು ವಿವರಿಸಿದೆ’ ಎಂದು ತಿಳಿಸಿದ್ದಾರೆ.
ಮಹಿಳೆ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿಲ್ಲ ಎಂದಿರುವ ಸಿಂಗ್‌, ‘ಮಹಿಳೆ ಮಾಡಿದ ಕೆಲಸದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ನನಗಿಷ್ಟವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

See also  ಕೊರಗಜ್ಜನ ಕವಿತೆಗಳಲ್ಲಿ ಆಕ್ಷೇಪಾರ್ಹ ಪದ ಬಳಕೆ, ಜಾಲತಾಣಗಳಲ್ಲಿ ಕುಹಕವಾಡುತ್ತಿರುವವರು ಯಾರು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget