ಕರಾವಳಿಪುತ್ತೂರುರಾಜಕೀಯ

“ಹಿಜಾಬ್, ಹಲಾಲ್, ಆಜಾನ್ ಅಂತ ಗಲಾಟೆ ಎಬ್ಬಿಸಿದ್ರೆ ಜೈಲು ಸೇರ್ತಿರಿ” ಚಕ್ರವರ್ತಿ ಸೂಲಿಬೆಲೆಗೆ ಸಚಿವ ಎಂಬಿ ಪಾಟೀಲ್ ಎಚ್ಚರಿಕೆ

263

ನ್ಯೂಸ್ ನಾಟೌಟ್: ಗಲಾಟೆ, ಹಿಂದಿನಂತೆ ನಾಟಕ ಮಾಡಿದ್ರೆ ಜೈಲು ಪಾಲಾಗ್ತೀರಿ ಹುಷಾರ್ ಎಂದು ಚಕ್ರವರ್ತಿ ಸೂಲಿಬೆಲೆಗೆ ಸಚಿವ ಎಂಬಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ರಾಜ್ಯದಲ್ಲಿ ಹಿಟ್ಲರ್ ಸರಕಾರ ಇದೆ ಎಂದಿದ್ದ ಚಕ್ರವರ್ತಿ ಸೂಲಿಬೆಲೆಗೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ಹಿಂದೆ ಹಿಜಾಬ್, ಹಲಾಲ್ ಎಂದು ಗಲಾಟೆ ಮಾಡಿದ್ದೀರಿ. ಇದಕ್ಕೆಲ್ಲ ಬ್ರೇಕ್ ಹಾಕುತ್ತೇವೆ. ಇನ್ನು ಮುಂದೆ ಅದೆಲ್ಲ ನಡೆಯಲ್ಲ. ಏನಾದರೂ ಗಲಾಟೆ ಮಾಡಿದರೆ ಜೈಲು ಕಂಬಿ ಏಣಿಸ್ತೀರಾ ಹುಷಾರ್ ಎಂದು ಹೇಳಿದರು. ಬಿಜೆಪಿ ಆಡಳಿತಾವಧಿಯಲ್ಲಿ ಜನರ ಬದುಕು ಕಟ್ಟಿಕೊಡುವ ಬದಲಾಗಿ ಹಿಜಾಬ್, ಹಲಾಲ್, ಆಜಾನ್ ಎಂದೆಲ್ಲಾ ಕೋಮು ಸೌಹಾರ್ದತೆ ಕದಡಲು ಯತ್ನಿಸಿದ ಬಿಜೆಪಿಯ ಎಲ್ಲ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದಾಗಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

See also  ಪುತ್ತೂರು: ರಿಕ್ಷಾ ಅಪಘಾತ, ಚಾಲಕ ಗಂಭೀರ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget