ಕರಾವಳಿ

ಬೆಳ್ತಂಗಡಿ : ಧರ್ಮಸ್ಥಳ ಮಂಜುನಾಥನ ದೇವರ ದರ್ಶನ ಪಡೆದ ಸಚಿವ ಮಂಕಾಳ ವೈದ್ಯ

ನ್ಯೂಸ್‌ ನಾಟೌಟ್‌: ಕರ್ನಾಟಕ ಸರ್ಕಾರದ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಸೋಮವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಧರ್ಮಸ್ಥಳ ಭೇಟಿ ವೇಳೆ ಮಂಕಾಳ ವೈದ್ಯ ಜೊತೆ ಪತ್ನಿ ಪುಷ್ಪಲತಾ , ಕಾಂಗ್ರೆಸ್ ಮುಖಂಡ ವಿನಾಯಕ್ ವೈದ್ಯ ಭಟ್ಕಳ , ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ್, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಜತೆಯಲ್ಲಿದ್ದರು. ಸಚಿವರಿಗೆ ಧರ್ಮಸ್ಥಳದ ಮ್ಯಾನೇಜರ್ ಪಾರ್ಶ್ವನಾಥ್ ದೇವರ ದರ್ಶನಕ್ಕೆ ಹಾಗೂ ಧರ್ಮಾಧಿಕಾರಿಗಳ ಭೇಟಿಗೆ ಸಹಕರಿಸಿದರು.

Related posts

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ ‘ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್-2023’,ಐ.ಆರ್.ಸಿ.ಎಂ.ಡಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗೋದಕ್ಕೆ ಕಾರಣವೇನು ?

ಸುಳ್ಯ : ರಾಘವ ಮಾಲಕತ್ವದ ‘ಹೋಟೆಲ್ ರೂಪಾ’ ಇಂದಿನಿಂದ ಶುಭಾರಂಭ, ಈ ಹೋಟೆಲ್ ವಿಶೇಷತೆಗಳೇನು ಗೊತ್ತಾ..?

ಉಪ್ಪಿನಂಗಡಿ: ಪಿಕಪ್ ನಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ..! ಹಸು, ಹೋರಿ ಹಾಗೂ ಕರು ಪೊಲೀಸರ ವಶಕ್ಕೆ