ಕಡಬ: ಇಲ್ಲಿನ ತಾಲೂಕಿಗೆ ಸಂಬಂಧಪಟ್ಟ ಹಾಗೆ ಅಕ್ರಮ-ಸಕ್ರಮ ಸಮಿತಿ ಸಭೆಯನ್ನು ಸಚಿವ ಎಸ್ ಅಂಗಾರ ರವರ ಅಧ್ಯಕ್ಷತೆಯಲ್ಲಿ ಬುಧವಾರ ಪೆರಾಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಪಟ್ಟಂತೆ ವಿವಿಧ ಪಿಂಚಣಿ ಯೋಜನೆಗಳ ಮಂಜೂರಾತಿ ಪತ್ರ ವಿತರಿಸಲಾಯಿತು. ಒಟ್ಟು 37 ಫಲಾನುಭವಿಗಳಿಗೆ ಪಿಂಚಣಿ ಯೋಜನೆಗಳ ಮಂಜೂರಾತಿ ಪತ್ರ, ಕಡಬ ತಾಲೂಕಿ 21 ಫಲಾನುಭವಿಗಳಿಗೆ ಈ ಹಿಂದಿನ ಅಕ್ರಮ ಸಕ್ರಮ ಬೈಠಕ್ ನಲ್ಲಿ ಮಂಜೂರಾದ ಸಾಗುವಳಿ ಚೀಟಿಗಳನ್ನು ಸಚಿವರು ವಿತರಣೆ ಮಾಡಿದರು. ಇಂದಿನ ಅಕ್ರಮ ಸಕ್ರಮ ಬೈಠಕ್ ನಲ್ಲಿ ಕಡಬ ತಾಲೂಕಿಗೆ ಸಂಬಂಧಿಸಿದ ವಿವಿಧ ಗ್ರಾಮಗಳ ಒಟ್ಟು 125 ಕಡತಗಳನ್ನು ವಿಲೇವಾರಿ ಮಾಡಲಾಯಿತು.