ನ್ಯೂಸ್ ನಾಟೌಟ್: ಯಾದಗಿರಿಯಲ್ಲಿ ಕೋಟ್ಯಾಧೀಶ್ವರನ 26 ವರ್ಷದ ಪುತ್ರಿ ಐಷಾರಾಮಿ ಜೀವನ ತ್ಯಜಿಸಿ ಸನ್ಯಾಸತ್ವ ಸೀಕಾರಕ್ಕೆ ಮುಂದಾಗಿದ್ದಾರೆ.
ಯಾದಗಿರಿ ನಗರದ ಜೈನ್ ಬಡಾವಣೆಯ ನರೇಂದ್ರ ಗಾಂಧಿ ಹಾಗೂ ಸಂಗೀತಾ ಗಾಂಧಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಪುತ್ರ ಇದ್ದಾನೆ. ಅದರಲ್ಲಿ ಈಗ26 ವರ್ಷದ ಪುತ್ರಿ ನಿಖಿತಾ ಐಷಾರಾಮಿ ಜೀವನ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ.
ನರೇಂದ್ರ ಗಾಂಧಿ ಕೋಟ್ಯಾಧಿಪತಿ. ದೊಡ್ಡ ಶ್ರೀಮಂತ. ಆದರೆ, ಇದೀಗ ಕೋಟ್ಯಾಧೀಶನ ಪುತ್ರಿ ನಿಖಿತಾ ಸಿರಿ ಸಂಪತ್ತು ಯಾವುದು ಬೇಡವೆಂದು ಸನ್ಯಾಸತ್ವಕ್ಕೆ ಕಾಲಿಟ್ಟಿದ್ದಾರೆ. ಕಳೆದ ಏಳು ವರ್ಷದಿಂದ ಸನ್ಯಾಸಿ ಆಗಬೇಕೆಂದು ನಿಖಿತಾ ಬಯಸಿದ್ದಳು ಎನ್ನಲಾಗಿದೆ. ಅದರಂತೆ ಇದೀಗ ನಿಖಿತಾಳ ಆಸೆ ಈಡೇರಿದೆ.
ನಿಖಿತಾ ಸನ್ಯಾಸತ್ವ ಸ್ವೀಕರಿಸಲು ತೀರ್ಮಾನಿಸಿದ್ದರಿಂದ ಕೊನೆಯದಾಗಿ ಸಂಬಂಧಿಕರು ಎಲ್ಲರೂ ಸೇರಿ ಯಾದಗಿರಿಯಲ್ಲಿಂದು ನಿಖಿತಾಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿದ್ದಾರೆ. ನಾನಾ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಗಿದ್ದು, ಇದರಲ್ಲಿ ಇಡೀ ಜೈನ ಸಮುದಾಯವೇ ಪಾಲ್ಗೊಂಡಿದ್ದರು.
ತಾನು ಇನ್ಮುಂದೆ ಯಾವುದೇ ವಸ್ತುಗಳನ್ನ ಬಳಸಲ್ಲ ಎನ್ನುವ ಕಾರಣಕ್ಕೆ ನಿಖಿತಾ ಮೆರವಣಿಗೆ ವೇಳೆ ಹೊಸ ಬಟ್ಟೆ ಸೇರಿದಂತೆ ನಾನಾ ವಸ್ತುಗಳನ್ನ ಜನರಿಗೆ ದಾನ ಮಾಡಿರು. ಹೀಗಾಗಿ ಕೊನೆಯದಾಗಿ ಹೊಸ ಬಟ್ಟೆ, ಚಿನ್ನಾಭರಣ ಧರಿಸಿಕೊಂಡು ಖುಷಿಪಟ್ಟರು.
4ನೇ ಮಹಡಿಯಿಂದ ಹಾರಿದ 17 ವರ್ಷದ ಬಾಲಕ..! ಆತನ ಹೆತ್ತವರು ಹೇಳಿದ್ದೇನು..?