Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಸೇನಾ ಪ್ರದೇಶದ ಫೋಟೊ ತೆಗೆದ ಇಬ್ಬರು ಪೊಲೀಸ್ ವಶಕ್ಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ

310

ನ್ಯೂಸ್‌ ನಾಟೌಟ್:ಮಧ್ಯಪ್ರದೇಶದ ಜಬಲ್‌ ಪುರ ಸೇನಾ ಪ್ರದೇಶದ ಫೋಟೊ ತೆಗೆದ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಶನಿವಾರ(ಮೇ.3) ತಿಳಿಸಿದ್ದಾರೆ.

‌ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ವಾತಾವರಣ ಹೆಚ್ಚುತ್ತಿರುವ ಹಿನ್ನೆಲೆ ದೇಶದ ಎಲ್ಲಾ ಸೇನಾ ಪ್ರದೇಶಗಳು ಬಿಗಿ ಕಣ್ಗಾವಲಿನಲ್ಲಿವೆ. ಸೇನೆ ನೀಡಿದ ಅಧಿಕೃತ ಫೋಟೋ ಮತ್ತು ವಿಡಿಯೋಗಳನ್ನು ಮಾತ್ರ ಮಾಧ್ಯಮಗಳಲ್ಲಿ ಬಳಸಬೇಕು ಎನ್ನುವ ನಿರ್ಬಂಧವಿದೆ.

‘ದಂಡು ವಲಯದ ಸೇನಾ ‍ಪ್ರದೇಶಗಳ ಚಿತ್ರ ತೆಗೆದಯುತ್ತಿದ್ದ ಮೊಹಮ್ಮದ್ ಝುಬೇರ್ (32) ಹಾಗೂ ಮೊಹಮ್ಮದ್ ಇರ್ಫಾನ್ (22) ಎಂಬಿಬ್ಬರನ್ನು ಸೇನಾ ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ಉದಯ್‌ ಬನ್ ಬಗ್ರಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ಯಾವುದೇ ದುರುದ್ದೇಶ ಇಲ್ಲದೇ, ಸಾಮಾನ್ಯವಾಗಿ ಫೋಟೊ ತೆಗೆದಿದ್ದೇವೆ ಎಂದು ಅವರು ವಿಚಾರಣೆ ವೇಳೆ ಇಬ್ಬರೂ ಹೇಳಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದೇವೆ. ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಗೆ ಪಾಕಿಸ್ತಾನ ಸುಮಾರು 300 ರಿಂದ 400 ಡ್ರೋನ್‌ ಗಳನ್ನು ಬಳಸಿದೆ ಎಂದ ಕರ್ನಲ್ ಸೋಫಿಯಾ ಖುರೇಷಿ..! ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸುದ್ದಿಗೋಷ್ಠಿ..!

See also  ಮುಸ್ಲಿಂ ಏರಿಯಾದಲ್ಲಿ ಅಯೋಧ್ಯ ಮಂತ್ರಾಕ್ಷತೆ ವಿತರಣೆ ವೇಳೆ ಗಲಾಟೆ..! ಹಿಂದೂ ಯುವಕರ ಮೇಲೆ ದಾಳಿ ಆರೋಪ, ಮುಂದೇನಾಯ್ತು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget