ಕ್ರೈಂರಾಜ್ಯವೈರಲ್ ನ್ಯೂಸ್

ಸಿಎಂ ಎಚ್ಚರಿಕೆಯ ಬಳಿಕವೂ ನಿಲ್ಲದ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ..! ವಿಷದ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆ..!

ನ್ಯೂಸ್ ನಾಟೌಟ್: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿ ಮೀರಿದ್ದು ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಮೈಕ್ರೋ ಫೈನಾನ್ಸ್ ಹಾವಳಿಗೆ ಹೆದರಿ ಮಹಿಳೆಯೊಬ್ಬರು ವಿಷದ ಮಾತ್ರೆ ನುಂಗಿ ಜೀವ ಕಳೆದುಕೊಂಡಿದ್ದಾರೆ.

ಮೈಸೂರಿನ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಮಹಿಳೆ ಜಯಶೀಲ (53) ಪ್ರಾಣ ಬಿಟ್ಟವರು ಎಂದು ಗುರುತಿಸಲಾಗಿದೆ. ಈ ಮಹಿಳೆ ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆ ಎಂದು ಐಐಎಫ್ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ​​ನಲ್ಲಿ 5 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಇದಕ್ಕಾಗಿ ಪ್ರತಿ ತಿಂಗಳು 20 ಸಾವಿರ ರೂಪಾಯಿ ಕಂತುಗಳನ್ನು ಕಟ್ಟುತ್ತಿದ್ದರು. ಆದರೆ ಇತ್ತಿಚೇಗೆ ಹಸುವಿನ ಆಕಸ್ಮಿಕ ಮರಣದಿಂದ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ಇಎಂಐ ಕಟ್ಟಲು ಸಮಸ್ಯೆ ಎದುರಾಗಿತ್ತು.

ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದ ಮಹಿಳೆ, ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಜಮೀನಿನಲ್ಲಿ ವಿಷದ ಮಾತ್ರೆಗಳನ್ನು ನುಂಗಿ ಒದ್ದಾಡುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯೆ ಮಹಿಳೆ ಜೀವ ಬಿಟ್ಟಿದ್ದಾರೆ. ಸದ್ಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮಾಡುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಮೈಕ್ರೋ ಫೈನಾನ್ಸ್​​ನಿಂದ ಸಮಸ್ಯೆಯಾಗಿ ಗ್ರಾಮಸ್ಥರು ಊರು ಬಿಡುತ್ತಿದ್ದಾರೆ, ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾದ ಸಿಎಂ ಸಿದ್ದರಾಮಯ್ಯ ಕಾನೂನು ಕ್ರಮದ ಎಚ್ಚರಿಕೆ ನೀಡಿ, ಬಡ್ಡಿದರಗಳಿಗೆ ಮಿತಿ ಸೂಚಿಸಿದ್ದರು. ಆದರೆ, ಈಗ ಸಿಎಂ ತವರು ಕ್ಷೇತ್ರದಲ್ಲೆ ಮಹಿಳೆ ಸಾವನ್ನಪ್ಪಿದ್ದಾರೆ.

Click

https://newsnotout.com/2025/01/kannada-news-actress-shashikala-serial-kannada-news-fir/
https://newsnotout.com/2025/01/monkey-kannada-news-10-student-nomore-d/

Related posts

ಪುತ್ತೂರು: ತಹಶಿಲ್ದಾರ್ ಮನೆಗೆ ಲೋಕಾಯುಕ್ತ ದಾಳಿ! ಕಂತೆ-ಕಂತೆ ನಗದು ಹಣ ನೋಡಿ ಅಧಿಕಾರಿಗಳು ಶಾಕ್!

ಮಲ್ಲೇಶ್ವರಂ ಕೆಫೆ ಸ್ಫೋಟದ ಉಗ್ರನಿಂದ ಜೈಲಿನೊಳಗಿಂದಲೇ ಹನಿಟ್ರ್ಯಾಪ್ ದಂಧೆ..! ಮುಚ್ಚಿ ಹಾಕಲು 50,000 ರೂ. ನೀಡುವಂತೆ ಬೆದರಿಕೆ..!

ಚರಂಡಿಗೆ ಬಿದ್ದ ಮುಸ್ಲಿಂ ವ್ಯಕ್ತಿಯ ಕಾರನ್ನು ಮೇಲಕ್ಕೆತ್ತಲು ನೆರವಾದ ಹಿಂದೂ ನಾಯಕ ಅರುಣ್ ಪುತ್ತಿಲ, ಪುತ್ತಿಲ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ