ನ್ಯೂಸ್ ನಾಟೌಟ್: ಬಿಎಂಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್ ಗೆ ಡಿಕ್ಕಿಯಾದ ಘಟನೆ ಗಾಯಗೊಂಡಿದ್ದ 12 ಮಂದಿ ಪೈಕಿ ಈರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಬಿಡದಿ ಮೂಲದ ಜಯರಾಮ್ (57) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಶುಕ್ರವಾರ(ಜೂ.6) ರಾತ್ರಿ 8:30 ರ ಸುಮಾರಿಗೆ ಕೆಂಗೇರಿಯ ಮೈಲಸಂದ್ರದ ಬಳಿ ಮೆಟ್ರೋ ಪಿಲ್ಲರ್ ಗೆ ಬಸ್ ಡಿಕ್ಕಿಯಾದ ಘಟನೆ ನಡೆದಿತ್ತು.
ಡ್ರೈವರ್, ಕಂಡಕ್ಟರ್ ಸೇರಿ 12 ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಶನಿವಾರ ತಡರಾತ್ರಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಬಸ್ ಕೆ.ಆರ್ ಮಾರ್ಕೆಟ್ ನಿಂದ ಬಿಡದಿಗೆ ಹೊರಟಿತ್ತು. ಈ ವೇಳೆ ಸ್ಟೇರಿಂಗ್ ಕಟ್ಟಾಗಿ ನಿಯಂತ್ರಣ ಕಳೆದುಕೊಂಡಿದ್ದರಿಂದ ಬಸ್ ಮೆಟ್ರೋ ಪಿಲ್ಲರ್ 607ಕ್ಕೆ ಡಿಕ್ಕಿಯಾಗಿತ್ತು.
ಘಟನೆ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಎಸ್ ಯಡಿಯೂರಪ್ಪ ಮೊಮ್ಮಗನ ಅದ್ಧೂರಿ ಆರತಕ್ಷತೆಯಲ್ಲಿ ಜೆ.ಪಿ ನಡ್ಡಾ ಮತ್ತು ಉಪರಾಷ್ಟ್ರಪತಿ ಭಾಗಿ, ಇಂದು(ಜೂ.8) ವಿವಾಹ