ಕ್ರೈಂ

ಸೊಸೆ ಸ್ನಾನ ಮಾಡುವಾಗ ಇಣುಕಿ ನೋಡಿದ ಮಾವ..!

530

ಬೆಂಗಳೂರು: ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿರುವ ಮಾವ, ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ನಗರದ ನಿವಾಸಿಯಾಗಿರುವ 24 ವರ್ಷದ ಮಹಿಳೆ ದೂರು ನೀಡಿದ್ದಾರೆ. 63 ವರ್ಷದ ಮಾವನ (ಪತಿಯ ತಂದೆ) ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ದೂರುದಾರ ಮಹಿಳೆ, 2015ರಲ್ಲಿ ಯುವಕರೊಬ್ಬರನ್ನು ಮದುವೆಯಾಗಿದ್ದರು. ದಂಪತಿಗೆ 6 ವರ್ಷಗಳ ಮಗು ಇದೆ. ಆದರೆ, ಮೂರು ತಿಂಗಳ ಹಿಂದಷ್ಟೇ ಮಹಿಳೆಯ ಪತಿ ಹೃದಯಾಘಾತದಿಂದ ತೀರಿಕೊಂಡಿದ್ದಾರೆ.

‘ಒಂಟಿಯಾದ ಮಹಿಳೆ ಮೇಲೆ ಕಣ್ಣು ಹಾಕಿದ್ದ ಮಾವ, ಕಿರುಕುಳ ನೀಡಲಾರಂಭಿಸಿದ್ದ. ತನ್ನ ಮಗ ನೀಡುವ ಸುಖವನ್ನೆಲ್ಲ ನೀಡುವುದಾಗಿ ಹೇಳಿ ಅಸಭ್ಯವಾಗಿ ಮಾತನಾಡುತ್ತಿದ್ದ. ಮಹಿಳೆ ಸ್ನಾನ ಮಾಡುವಾಗಲೂ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಗೆ ಜೀವಬೆದರಿಕೆಯೊಡ್ಡಿದ್ದ ಎಂದು ತಿಳಿಸಿವೆ.

See also  ರಾಮೇಶ್ವರಂ ಕೆಫೆಯಲ್ಲಿ ಬಾಂಬಿಟ್ಟವನಿಗೆ ವಿದೇಶದಿಂದ ಬಂದಿತ್ತಾ ಹಣ..? ಗುಪ್ತಚರ ಇಲಾಖೆಗೆ ಸ್ಫೋಟದ ಇಂಚಿಂಚೂ ಮಾಹಿತಿ ಲಭ್ಯ..!
  Ad Widget   Ad Widget     Ad Widget   Ad Widget   Ad Widget   Ad Widget