ಕ್ರೈಂ

ಅನ್ಯ ಜಾತಿಯ ಯುವತಿಯನ್ನು ವಿವಾಹವಾಗಿದ್ದಕ್ಕೆ ಯುವಕನ ಬರ್ಬರ ಹತ್ಯೆ

325

ಹೈದರಾಬಾದ್; ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್​ನ ಬೇಗುಂ ಬಜಾರ್​ನಲ್ಲಿ ನಡೆದಿದೆ. ಇದೀಗ ಪ್ರಕರಣಕ್ಕೆ ಅನ್ಯ ಜಾತಿಯ ಯುವತಿಯ ಜೊತೆಗಿನ ಪ್ರೇಮ ವಿವಾಹವೇ ಕಾರಣ ಎಂದು ಯುವಕನ ಕುಟುಂಬ ಆರೋಪಿಸಿದೆ.

ಮೃತ ಯುವಕನನ್ನು ನೀರಜ್​ ಪನ್ವಾರ್ (21)​ ಎಂದು ಗುರುತಿಸಲಾಗಿದೆ. ಈತ ಬೇರೊಂದು ಜಾತಿಯ ಯುವತಿಯನ್ನು ಮದುವೆ ಆಗಿದ್ದ.ವಿರೋಧದ ನಡುವೆಯೂ ಮದುವೆಯಾಗಿದ್ದ. ಪನ್ವಾರ್ ದಂಪತಿಗೆ ಎರಡೂವರೆ ತಿಂಗಳ ಹಸಿಗೂಸಿದೆ. ಐದು ಮಂದಿಯ ಗ್ಯಾಂಗ್​ ಯುವಕನನ್ನು ನಡುರಸ್ತೆಯಲ್ಲೇ ಕುಟುಂಬದ ಎದುರಲ್ಲೇ ಮಾರಕಾಸ್ತ್ರಗಳಿಂದ ಇರಿದು ಕೊಲೆ‌ ಮಾಡಿದೆ. ಯುವತಿಯ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ನೀರಜ್ ಕೊಲೆಗೆ ಪ್ರೀತಿ‌ ಮಾಡಿ ವಿವಾಹವಾಗಿರುವುದೇ ಕಾರಣ ಎಂದು ಪನ್ವಾರ್ ಕುಟುಂಬ ಆರೋಪಿಸಿದೆ.

See also  ಬೆಳ್ತಂಗಡಿ: ಯುವತಿಯೊಂದಿಗೆ ಮಾತನಾಡಿದ ಅನ್ಯಕೋಮಿನ ಯುವಕ! ಯುವಕರ ತಂಡದಿಂದ ಹಲ್ಲೆ!
  Ad Widget   Ad Widget   Ad Widget   Ad Widget   Ad Widget   Ad Widget