ಕ್ರೈಂ

ಕಾಣಿಯೂರು: ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಯುವಕ

530

ಕಡಬ: ಇಲ್ಲಿನ ಕಾಣಿಯೂರು ಸಮೀಪದ ಪುಣ್ಚತ್ತಾರು  ಬೇಂಗಡ್ಕ ಎಂಬಲ್ಲಿಯ ಕೆರೆಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದೆ. ಸುಂದರ ಪೂಜಾರಿ ಎಂಬವರ ಪುತ್ರ ಹರೀಶ್  (29) ಎಂಬವರು ಕೆರೆಗೆ ಬಿದ್ದು ಸಾವನ್ನಪ್ಪಿದ ಯುವಕ.   ತನ್ನ ಕೃಷಿ ತೋಟಕ್ಕೆ ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಇವರು  ಕೆರೆಗೆ ಬಿದ್ದಿರುವ ಬಗ್ಗೆ ಮೃತರ ತಂದೆ ಸುಂದರ ಪೂಜಾರಿ  ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮೃತರು ತಂದೆ ಸುಂದರ ಪೂಜಾರಿ, ತಾಯಿ ಪ್ರೇಮಲತಾ, ಸಹೋದರ ಗಿರೀಶ್ ರವರನ್ನು ಅಗಲಿದ್ದಾರೆ. ಕೆರೆಯ ಪಕ್ಕದಲ್ಲಿ ಚಪ್ಪಲಿ ಪತ್ತೆಯಾಗಿದ್ದ  ಹಿನ್ನೆಲೆಯಲ್ಲಿ ಯಾರೋ ಕೆರೆಗೆ   ಬಿದ್ದಿರಬೇಕು ಎಂಬ ಶಂಕೆಯಲ್ಲಿ ಅಗ್ನಿಶಾಮಕ ದಳದವರು   ಶೋಧ ನಡೆಸಿದ್ದರು. ಈ ವೇಳೆ  ಯುವಕನ  ಮೃತದೇಹ ಪತ್ತೆಯಾಗಿದೆ. ಘಟನ ಸ್ಥಳಕ್ಕೆ ಬೆಳ್ಳಾರೆ ಎಸ್ ಐ ಆಂಜನೇಯ ರೆಡ್ಡಿ ಭೇಟಿ ನೀಡಿದ್ದಾರೆ.

See also  ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 21ನೇ ಆರೋಪಿ ಅರೆಸ್ಟ್..! ಪ್ರಮುಖ ಕೊಲೆ ಆರೋಪಿಯನ್ನು ಚೆನ್ನೈಗೆ ಕಳುಹಿಸಿ ಪರಾರಿಯಾಗಲು ನೆರವು ನೀಡಿದ್ದವನ ಬಂಧನ..!
  Ad Widget   Ad Widget   Ad Widget   Ad Widget   Ad Widget