ವಿಡಿಯೋ

ನೊಣವನ್ನು ನಾಲಿಕೆಯಲ್ಲಿಟ್ಟುಕೊಂಡು ಗುಳುಂ ಸ್ವಾಹ ಮಾಡಿದ ಯುವತಿ..!

ನ್ಯೂನ್ ನಾಟೌಟ್: ಬೆಂಕಿಯನ್ನು ನಾಲಿಗೆ ಮೇಲಿಟ್ಟುಕೊಂಡು ನುಂಗುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಯುವತಿ ನೊಣವನ್ನೇ ನಾಲಿಗೆ ಮೇಲಿಟ್ಟುಕೊಂಡು ಗುಳುಂ ಸ್ವಾಹ ಮಾಡಿದ ವಿಡಿಯೋ ವೈರಲ್ ಆಗಿದೆ. ಆದರೆ ನೊಣವನ್ನು ಗುಳುಂ ಮಾಡಿದ ಬಳಿಕ ಮುಂದಿನ ವಿಚಾರ ನಿಮ್ಮನ್ನು ಭಾರಿ ಅಚ್ಚರಿಗೆ ಒಳಪಡಿಸದೆ ಇರದು. ಏಕೆಂದರೆ ಚಾಲಾಕಿ ನೊಣ ಆಕೆ ಪೂರ್ಣವಾಗಿ ನುಂಗುವ ಮೊದಲು ಸಣ್ಣ ಗ್ಯಾಪ್ ನಲ್ಲಿ ಹಾರಿ ತಪ್ಪಿಸಿಕೊಂಡಿದೆ. ಆದರೆ ಈಕೆ ಮಾತ್ರ ನೊಣವನ್ನು ತಿಂದಿದ್ದೇನೆ ಅನ್ನುವ ಪೋಸ್ ಕೊಟ್ಟಿದ್ದಾಳೆ. ಈ ವಿಡಿಯೋ ಜಾಲತಾಣದಲ್ಲಿ ಭಾರೀ ವೀಕ್ಷಣೆಗೆ ಕಾರಣವಾಗಿದೆ.

ವಿಡಿಯೋದಲ್ಲಿ ಹುಡುಗಿಯೊಬ್ಬಳು ಮಲಗಿದ್ದ ವೇಳೆ ಅವಳ ಕೆನ್ನೆ ಮೇಲೆ ನೊಣ ಬಂದು ಕೂತಿರುತ್ತದೆ. ತಕ್ಷಣ ಆಕೆ ಮೊಬೈಲ್ ಆನ್ ಮಾಡಿ ರೆಕಾರ್ಡ್ ಮಾಡಿದಳು. ಈ ವೇಳೆ ನೊಣದ ವಿಡಿಯೋ ಮಾಡುವಾಗ ನಾಲಗೆಯನ್ನು ನೊಣದ ಹತ್ತಿರ ಹಾಕುವ ವೇಳೆ ನಾಲಿಗೆ ಮೇಲೆ ಕುಳಿತು ಬಿಡುತ್ತದೆ. ಈ ಸಂದರ್ಭದಲ್ಲಿ ನಾಲಿಗೆಯನ್ನು ಬಾಯಿಯೊಳಗೆ ಎಳೆಯಲು, ತಕ್ಷಣ ಬಾಯಿಯನ್ನು ಮುಚ್ಚಿದಳು. ಇನ್ನೇನು ಹುಡುಗಿ ನೊಣ ತಿಂದಳು ಎನ್ನುವಷ್ಟರಲ್ಲಿ ಬಾಯಿ ತೆರೆದಳು . ನೊಣವು ಹಾರಿಹೊಯಿತು. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಆಶ್ಚರ್ಯ ಪಡುವುದರ ಜೊತೆಗೆ ಕಾಮಿಡಿ ರೀತಿಯಲ್ಲಿ ಹೊಟ್ಟೆ ಹುಣ್ಣಾಗುವಂತೆ ನಕ್ಕರು.

https://www.instagram.com/reel/Cm03_jGgCfT/?utm_source=ig_web_copy_link

Related posts

1200ಕ್ಕೂ ಹೆಚ್ಚು ಮಹಿಳೆಯರಿಂದ ದಿಢೀರ್ ದಾಳಿ! 12 ಉಗ್ರರನ್ನು ಬಿಟ್ಟುಕಳುಹಿಸಿದ್ದೇಕೆ ಸೇನೆ! ಇಲ್ಲಿದೆ ವಿಡಿಯೋ

ಅಬ್ದುಲ್ ಕಲಾಂ ರಾಷ್ಟ್ರೀಯ ಸ್ಮಾರಕದ ಗೋಡೆಗೆ ಡಿಕ್ಕಿ ಹೊಡೆದು ಆಟೋರಿಕ್ಷಾ ಪಲ್ಟಿ..! ಇಲ್ಲಿದೆ ವೈರಲ್ ವಿಡಿಯೋ

ನಿತ್ಯಾನಂದನ ಕೈಲಾಸ ದೇಶದಲ್ಲಿ ಕನ್ನಡದ ಜೋಗಯ್ಯ ಹಾಡು..! ಸ್ವಯಂ ಘೋಷಿತ ದೇವ ಮಾನವನ ವೈರಲ್ ವಿಡಿಯೋ ಇಲ್ಲಿದೆ