ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

Meloni-Modi: ಪ್ರಧಾನಿ ಮೋದಿಗೆ ಶುಭ ಹಾರೈಸಿದ ಇಟಲಿ ಪ್ರಧಾನಿ ಮೆಲೋನಿ, ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ ‘ಮೆಲೋಡಿ’

ನ್ಯೂಸ್ ನಾಟೌಟ್: 543 ಲೋಕಸಭಾ ಸೀಟುಗಳ ಪೈಕಿ 291ರಲ್ಲಿ ಬಿಜೆಪಿ ನೇತೃತ್ವದ ‘ಎನ್‌ಡಿಎ’ ಮೈತ್ರಿಕೂಟ ಗೆಲುವು ಸಾಧಿಸಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿಗೆ ವಿದೇಶಿ ನಾಯಕರು ಶುಭ ಹಾರೈಸಿದ್ದಾರೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಶ್ರೀಲಂಕಾ ನಾಯಕ ಮಹಿಂದ ರಾಜಪಕ್ಸೆ, ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಜು, ನೇಪಾಳದ ಪ್ರಧಾನಿ ಪುಷ್ಪಕಮಲ್‌ ದಹಲ್‌ ಪ್ರಚಂಡ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಕೋರಿದ್ದಾರೆ. ‘ಹೊಸ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ನಿಮ್ಮ ಅಧಿಕಾರವಧಿಯಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಸಾಧಿಸಲಿ’ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಮೋದಿ ಮತ್ತು ಮೆಲೋನಿ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಬಹಳ ವೈರಲ್ ಆಗಿತ್ತು. ಈಗ ಮತ್ತೆ ಆ ಟ್ರೆಂಡ್ ಮುನ್ನಲೆಗೆ ಬಂದಿದೆ.

Click 👇

https://newsnotout.com/2024/06/pradeep-eshwar-and-election-challenge
https://newsnotout.com/2024/06/prajwal-revanna-dm-and-awar-about-scam

Related posts

ಏ.14 ರಂದು ಮೋದಿ ಮಂಗಳೂರಿಗೆ, ಮೋದಿ ಕರ್ನಾಟಕ ಪ್ರವಾಸದಲ್ಲಿ ಮಹತ್ವದ ಬದಲಾವಣೆ

ಕರಾವಳಿ ಹುಡುಗಿಯರ ಬೆತ್ತಲೆ ಫೋಟೋ ಎಡಿಟ್ ಮಾಡಿ ಬೆದರಿಸುತ್ತಿದ್ದವನ ಅರೆಸ್ಟ್..! ಇಲ್ಲಿದೆ ಸಂಪೂರ್ಣ ಕಹಾನಿ..!

ಕಾಲಿಗೆ ಸರಪಳಿ ಕಟ್ಟಿ 2 ವರ್ಷದಿಂದ ಅಪ್ರಾಪ್ತಳ ಮೇಲೆ ಸ್ವಾಮೀಜಿಯಿಂದ ಅತ್ಯಾಚಾರ..! ಬಂಧನದ ಬಳಿಕ ಈ ಬಗ್ಗೆ ಸ್ವಾಮೀಜಿ ಹೇಳಿದ್ದೇನು?