ಕ್ರೈಂ

9 ವರ್ಷದ ಬಾಲಕಿ 26/11 ಕಸಬ್‌ ಬಂಧನಕ್ಕೆ ಪ್ರಮುಖ ಕಾರಣಳಾಗಿದ್ದಳು..! ಗುಂಡೇಟು ಬಿದ್ದು 6 ಬಾರಿ ಆಪರೇಷನ್‌ಗೊಳಗಾದ ಬಾಲಕಿಯ ಸಾಹಸಗಾಥೆ ಇಲ್ಲಿದೆ ನೋಡಿ..

ನ್ಯೂಸ್ ನಾಟೌಟ್ : ಅಂದು ನವೆಂಬರ್ 26, 2008 ರಲ್ಲಿ ಮುಂಬೈನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಇಂದಿಗೆ 15 ವರ್ಷ. ಆ ಕರಾಳ ಘಟನೆಯನ್ನು ದೇಶದ ಜನತೆ ಈಗಲೂ ಮರೆತಿಲ್ಲ. ಈ ದಾಳಿಯಲ್ಲಿ ಸಜೀವವಾಗಿ ಸೆರೆಸಿಕ್ಕ ಉಗ್ರ ಅಜ್ಮಲ್‌ ಕಸಬ್‌ಗೆ ಶಿಕ್ಷೆಯಾಗಲು ಕಾರಣಕರ್ತರಲ್ಲಿ ಒಬ್ಬಳು ಈ ಬಾಲಕಿ. ದಾಳಿ ನಡೆದಾಗ 9 ವರ್ಷದ ಬಾಲಕಿ ಕಸಬ್‌ ಬಂಧನಕ್ಕೆ ಪ್ರಮುಖ ಕಾರಣಗಳಲ್ಲಿ ಒಬ್ಬಳಾಗಿದ್ದಳು.

ದೇವಿಕಾ ರೋಟವಾನ್ ನವೆಂಬರ್ 2008 ರಲ್ಲಿ ನಡೆದ ಭೀಕರ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಗುಂಡೇಟಿಗೆ ಒಳಗಾಗಿದ್ದಳು.ಛತ್ರಪತಿ ಶಿವಾಜಿ ರೈಲು ನಿಲ್ದಾಣದಲ್ಲಿ ಉಗ್ರ ಅಜ್ಮಲ್‌ ಕಸಬ್‌ ಈಕೆಯ ಕಾಲಿಗೆ ಗುಂಡು ಹಾರಿಸಿದ್ದ.ನಂತರ ಈಕೆ ತನ್ನ 11 ನೇ ವಯಸ್ಸಿನಲ್ಲಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದಳು.ಆಗ ಅವಳಿಗೆ ಕೇವಲ 9 ವರ್ಷ ವಯಸ್ಸು.ಈಗ 24 ವರ್ಷದ ಯುವತಿ. ಬಾಂದ್ರಾದ ಚೇತನಾ ಕಾಲೇಜಿನಲ್ಲಿ ಅಂತಿಮ ವರ್ಷದ ಬ್ಯಾಚುಲರ್ ಆಫ್ ಆರ್ಟ್ಸ್ (BA) ವಿದ್ಯಾರ್ಥಿನಿ.  

ಈ ಬಗ್ಗೆ ಮಾತನಾಡಿರುವ ಆಕೆ ಆ ಭೀಕರ ಘಟನೆಯನ್ನು ವಿವರಿಸುವುದು ತುಂಬಾ ಕಷ್ಟ.ಆ ದಿನ ರೈಲನ್ನು ಹತ್ತಲು ತಂದೆ ಮತ್ತು ಸಹೋದರನೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುವಾಗ ತನಗೆ ಗುಂಡು ತಗುಲಿದ ಬಲಗಾಲನ್ನು ತೋರಿಸುತ್ತಾ ದೇವಿಕಾ ಭೀಕರ ಘಟನೆಯನ್ನು ನೆನಪಿಸಿಕೊಂಡಿದ್ದಾಳೆ. ಆ ನಂತರ ಆಕೆ ಆರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.ಐಪಿಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದ ದೇವಿಕಾ,  26/11 ದಾಳಿಯ ಬಳಿಕ ತನ್ನ ಕನಸಿಗೆ ಹೇಗೆ ಅಡ್ಡಿಯಾಯಿತು ಎಂದು ಹೇಳಿದ್ದಾಳೆ. ನಾನು ಕನಸನ್ನು ನನಸಾಗಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಈಗ ನಾನು ನನ್ನ ಕುಟುಂಬವನ್ನು ಬೆಂಬಲಿಸಲು ಉದ್ಯೋಗ ಹುಡುಕುತ್ತಿದ್ದೇನೆ ಎಂದೂ ಹೇಳಿಕೊಂಡಿದ್ದಾಳೆ.

ದೇವಿಕಾ ಈ ದಾಳಿಯಿಂದ ಹಲವಾರು ವೈಯಕ್ತಿಕ ಹಿನ್ನಡೆಗಳಿಗೆ ಸಾಕ್ಷಿಯಾಗಿದ್ದಾಳೆ. ದಾಳಿ ನಡೆದು 3 ವರ್ಷಗಳಲ್ಲಿ ದೇವಿಕಾ ದೈಹಿಕವಾಗಿ ಚೇತರಿಸಿಕೊಂಡರೂ, ಇನ್ನೊಂದು ಸುತ್ತಿನ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ಕಾರಣದಿಂದಾಗಿ, ಅವಳು 10 ನೇ ತರಗತಿಯ ಬೋರ್ಡ್ ಪರೀಕ್ಷೆಯ ಸಮಯದಲ್ಲಿ ಕೆಲವು ವರ್ಷಗಳ ವಿರಾಮ ತೆಗೆದುಕೊಳ್ಳಬೇಕಾಯಿತು. ಕಸಬ್‌ನನ್ನು ಗಲ್ಲಿಗೇರಿಸಲು ಇಷ್ಟು ಸಮಯ ತೆಗೆದುಕೊಂಡಿದ್ದಕ್ಕಾಗಿ ವ್ಯವಸ್ಥೆಯ ಮೇಲಿನ ತನ್ನ ಆರಂಭಿಕ ಕೋಪವನ್ನು ನೆನಪಿಸಿಕೊಂಡ ದೇವಿಕಾ, ಅವನು ಜೈಲಿನಲ್ಲಿ ಚೆನ್ನಾಗಿ ಬದುಕುತ್ತಿದ್ದ, ಆದರೆ ಹೊರಗೆ ನಮ್ಮ ಜೀವನವು ಹೋರಾಟವಾಗಿತ್ತು ಎಂದಿದ್ದಾಳೆ. ಸ್ನೇಹಿತರು ಮತ್ತು ಸಂಬಂಧಿಕರು ತನ್ನಿಂದ ಇದೀಗ ದೂರವಾಗಿದ್ದಾರೆ ಮತ್ತು ತನ್ನನ್ನು “ಕಸಬ್ ಕೀ ಬೇಟಿ” ಎನ್ನುತ್ತಾರೆ ಎಂದೂ ಹೇಳಿದ್ದಾಳೆ. ಕಸಬ್‌ನನ್ನು ಗುರುತಿಸಿದ ಸಾಕ್ಷಿಗಳಲ್ಲಿ ನನ್ನ ತಂದೆ ಮತ್ತು ನಾನು ಇದ್ದ ಕಾರಣ, ನಮ್ಮನ್ನು ವಿಭಿನ್ನವಾಗಿ ನೋಡಲಾಯಿತು ಎಂದೂ ಸ್ಮರಿಸಿದ್ದಾಳೆ.

Related posts

ಪತ್ನಿಯ ತಲೆ ಕಡಿದು ತಲೆಯ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ್ದ ಪತಿ..! 4.5 ವರ್ಷದ ಬಳಿಕ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್..!

ಉದಯನಿಧಿ ಸ್ಟಾಲಿನ್‌ ತಲೆ ತಂದವರಿಗೆ 10 ಕೋ ರೂ. ಘೋಷಿಸಿದ ಸ್ವಾಮೀಜಿ! ಈ ಬಗ್ಗೆ ಉದಯನಿಧಿ ಸ್ಟಾಲಿನ್‌ ಹೇಳಿದ್ದೇನು?

Viral video: ಚಲಿಸುವ ಟ್ರಕ್‌ ನಿಂದ ಸಿನಿಮೀಯ ರೀತಿಯಲ್ಲಿ ಕಳ್ಳತನ..! ಕಳ್ಳರ ಹುಚ್ಚು ಸಾಹಸದ ವೈರಲ್ ವಿಡಿಯೋ ಇಲ್ಲಿದೆ..!