ನ್ಯೂಸ್ ನಾಟೌಟ್:ಮಗ ಎದೆಯೆತ್ತರಕ್ಕೆ ಬೆಳೆದರೂ ತಾಯಿಗೆ ಮಾತ್ರ ಆತ ಮಗುವಂತೆ ಕಾಣಿಸುತ್ತಾನೆ.ತಾಯಿ ತನ್ನ ಮಕ್ಕಳ ಮೇಲೆ ತೋರಿಸುವ ಪ್ರೀತಿಗೆ ಎಂದೂ ಬೆಲೆ ಕಟ್ಟಲಾಗದು.ಆಕೆ ಎಷ್ಟೇ ಮಕ್ಕಳಿಗೂ ಜನ್ಮ ನೀಡಿದ್ರೂ ಆಕೆಯ ಪ್ರೀತಿಯಲ್ಲಿ ತಾರತಮ್ಯವಿರೋದಿಲ್ಲ.ಮಗುವಿದ್ದಾಗ ಆಕೆಯ ಲಾಲನೆ ಪಾಲನೆ ಪೋಷಣೆಗೆ ತನ್ನ ಜೀವವನ್ನೇ ಮುಡುಪಾಗಿಡುತ್ತಾಳೆ. ಹೀಗೆ ಈಕೆ ಸಾಕಿದ ಮಗುವನ್ನು ಆತ ದೊಡ್ಡವನಾದ ಬಳಿಕ ಮದುವೆಯಾಗಿ ಬಂದವಳು ಪ್ರಾಣವನ್ನು ಮುಗಿಸುತ್ತಾಳೆಂದ್ರೆ ಹೆತ್ತ ಕರುಳಿಗೆ ಹೇಗಾಗಬೇಡ, ಎಷ್ಟು ನೋವಾಗಬೇಡ..ಹೌದು, ಇಲ್ಲೊಂದು ಘಟನೆ ಮನಸ್ಸನ್ನು ಕರಗಿಸುವಂತಿದೆ.
ಪತ್ನಿಯೊಬ್ಬಳು ತನ್ನ ಪತಿಯ ಪ್ರಾಣವನ್ನೇ ತೆಗೆದಿರುವ ಭೀಕರ ಘಟನೆ ಉತ್ತರ ಪ್ರದೇಶದ ಮೀರತ್ ನಿಂದ ವರದಿಯಾಗಿದೆ.ಸೌರಭ್ ಕುಮಾರ್ ಮೃತ ಪತಿ. ಮುಸ್ಕಾನ್ ಪತಿಯ ಪ್ರಾಣ ತೆಗೆದಿರುವ ಪತ್ನಿ. ಪ್ರಿಯರಕನ ಜತೆ ಸೇರಿ ಈ ಕೃತ್ಯವೆಸಗಿರೋದು ಬೆಳಕಿಗೆ ಬಂದಿದೆ.
ಸೌರಭ್ ಕುಮಾರ್ 2016ರಲ್ಲಿ ಪ್ರೀತಿಸಿ ಮುಸ್ಕಾನ್ ಎನ್ನುವವಳ ಜತೆ ವಿವಾಹವಾಗಿದ್ದ.ಈತ ಮೊದಲು ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ. ಆ ಬಳಿಕ ಲಂಡನ್‌ಗೆ ತೆರಳಿ ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಇತ್ತ ಮುಸ್ಕಾನ್ ತನ್ನ 5 ವರ್ಷದ ಮಗಳ ಜತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.ಗಂಡ ಲಂಡನ್‌ನಲ್ಲಿದ್ದಾಗ ಮುಸ್ಕಾನ್ ಗೆ ಸಾಹಿಲ್ ಶುಕ್ಲಾ ಎನ್ನುವವನ ಜತೆ ಸಂಬಂಧ ಬೆಳೆಸಿಕೊಂಡಿದ್ದಳು. ಪತ್ನಿಯ ಹುಟ್ಟುಹಬ್ಬಕ್ಕಾಗಿ ಪ್ರೀತಿಯಿಂದ ಪತಿ ಸೌರಭ್ ಇತ್ತೀಚೆಗಷ್ಟೇ ಲಂಡನ್‌ನಿಂದ ಬಂದಿದ್ದ. ಆದರೆ ಇದೇ ವೇಳೆ ಮುಸ್ಕಾನ್ ಪ್ರಿಯಕರ ಸಾಹಿಲ್ ಜತೆ ಸೇರಿ ಸೌರಭ್ ನ ಪ್ರಾಣ ತೆಗೆಯಲು ಪ್ಲ್ಯಾನ್ ಮಾಡಿದ್ದಾರೆ.ಮಾರ್ಚ್ 4 ರಂದು ಸೌರಭ್ ನ ಎದೆಗೆ ಚಾಕುವಿನಿಂದ ಚುಚ್ಚಿ ಆತನ ಪ್ರಾಣವನ್ನು ತೆಗೆದಿದ್ದಾರೆ.ಇದೆಲ್ಲ ಆದ ಬಳಿಕ ಮುಸ್ಕಾನ್ ಹಾಗೂ ಸಾಹಿಲ್ ದೇಹವನ್ನು ಹೇಗಾದ್ರೂ ಮಾಡಿ ಮುಚ್ಚಿಡಬೇಕು ಎನ್ನುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದಾರೆ.
ಬಳಿಕ ಅವರಿಗೆ ಒಂದು ಐಡಿಯಾ ಹೊಳೆಯುತ್ತೆ. ದೇಹವನ್ನು ಸೀಳಿ ಅದನ್ನು 15 ತುಂಡುಗಳಾಗಿ ಕತ್ತರಿಸಿ ಬಿಡುತ್ತಾರೆ.ಆ ನಂತರ ಪ್ಲ್ಯಾಸ್ಟಿಕ್ ಚೀಲದಲ್ಲಿ ತುಂಬಿದ್ದಾರೆ.ಇದಾದ ಬಳಿಕ ಅದನ್ನು ಡ್ರಮ್‌ನಲ್ಲಿ ಹಾಕಿದ್ದಾರೆ. ಡ್ರಮ್‌ಗೆ ಸಿಮೆಂಟ್ ತುಂಬಿಸಿದ್ದಾರೆ. ಕೃತ್ಯ ನಡೆದ ನಂತರ ಮುಸ್ಕಾನ್ ಸಾಹಿಲ್ ಜೊತೆ ಪರಾರಿಯಾಗಿದ್ದು, ಮಗಳನ್ನು ತಾಯಿ ಮನೆಯಲ್ಲಿ ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮುಸ್ಕಾನ್ ತಾಯಿಯೇ ಪೊಲೀಸರಿಗೆ ಕರೆ ಮಾಡಿ ಮಗಳ ನೀಚ ಕೃತ್ಯದ ಬಗ್ಗೆ ಹೇಳಿದ್ದಾರೆ.ಪೊಲೀಸರು ಮುಸ್ಕಾನ್ ಮತ್ತು ಆಕೆಯ ಪ್ರಿಯಕರನನ್ನು ವಿಚಾರಣೆ ನಡೆಸಿದಾಗ ಆರೋಪಿಗಳು ಸತ್ಯ ಬಾಯಿಬಿಟ್ಟಿದ್ದಾರೆ.ಆ ನಂತರ ದೇಹ ಬಚ್ಚಿಟ್ಟ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಸಿಮೆಂಟ್ ಗಟ್ಟಿಯಾಗಿದ್ದ ಕಾರಣದಿಂದ ದೇಹವನ್ನು ಹೊರೆಗೆ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಹೊರಗೆ ತೆಗೆದ ಬಳಿಕ ದೇಹವನ್ನು ಶವಾಗಾರಕ್ಕೆ ಕಳುಹಿಸಲಾಗಿದೆ.