ಕರಾವಳಿಸುಳ್ಯ

ಮೇದಿನಡ್ಕ: ನೂತನ ಧ್ವಜಸ್ತಂಬ ಉದ್ಘಾಟನೆ, 76ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ನ್ಯೂಸ್ ನಾಟೌಟ್ : ಅಜ್ಜಾವರದ ಮೇದಿನಡ್ಕದ ಮುತ್ತು ಶ್ರೀ ಫ್ರೆಂಡ್ಸ್ ಕ್ಲಬ್ ಹಾಗೂ ಶ್ರೀ ಮುತ್ತು ಮಾರಿಯಮ್ಮ ಸೇವಾ ಸಮಿತಿ ವತಿಯಿಂದ ನೂತನ ಧ್ವಜಸ್ತಂಬ ಉದ್ಘಾಟನೆ ಹಾಗೂ 76 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕೆ.ಎಫ್.ಡಿ.ಸಿ ನಿವೃತ್ತ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ರಂಗನಾಥ್ ರವರು ನೂತನ ದ್ಜಜ ಸ್ತಂಭ ಉದ್ಘಾಟಿಸಿ , ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಜ್ಜಾವರ ಗ್ರಾಮ ಪಂಚಾಯಿತ್ ಸದಸ್ಯರಾದ, ರವಿರಾಜ್ ಕರ್ಲಪಾಡಿ, ಪ್ರಸಾದ್ ರೈ ಮೇನಾಲ, ದಿವ್ಯ ಪಡ್ಡಂಬೈಲು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲ್ವಿಚಾರಕಿ ಶ್ರೀಮತಿ ರಜನಿ, ಹಾಗೂ ನಯನ್ ಕುಮಾರ್ ರೈ ಮೇನಾಲ, ಹಿರಿಯರಾದ ದಯಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿನೋದ್ ಮೇದಿನಡ್ಕ ಸ್ವಾಗತಿಸಿ, ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು, ಸಂಜಯ್, ಧನ್ಯವಾದ ಸಮರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಊರಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

Related posts

ಸುಳ್ಯ ನಗರಕ್ಕೆ ಶುದ್ಧ ಕುಡಿಯುವ ನೀರು ಕೊಡಿ: ವಿಪಕ್ಷಗಳ ಪ್ರತಿಭಟನೆ

ಮೂಡುಬಿದಿರೆ: ತರಗತಿಯೊಳಗೆ ಬಂದು ವಿದ್ಯಾರ್ಥಿನಿಯ ಮುಖಕ್ಕೆ ಕತ್ತರಿಯಿಂದ ಚುಚ್ಚಿದ ಯುವಕ..! ಆರೋಪಿಯನ್ನು ಬಂಧಿಸಿದ ಪೊಲೀಸರು..!

ಕಾರ್ಕಳದಲ್ಲಿ ಅಪರೂಪದ ಜೋಡಿಯ ಶುಭ ವಿವಾಹ