ಕೆವಿಜಿ ಕ್ಯಾಂಪಸ್‌

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಏಕ್ ಪೇಡ ಮಾಕ ನಾಮ್ ಕಾರ್ಯಕ್ರಮ, ಸೋಣಂಗೇರಿ ಮೂಲಿಕವನದಲ್ಲಿ ಔಷಧಿಯುಕ್ತ ಗಿಡಗಳ ನಾಟಿ

138

ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಮಂಗಳವಾರ (ಅ. 29) ಏಕ್ ಪೇಡ್ ಮಾ ಕೆ ನಾಮ್ ಘೋಷವಾಕ್ಯದಡಿಯಲ್ಲಿ ಕಾಲೇಜಿನ ಸೋಣಂಗೇರಿ ಮೂಲಿಕವನದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾದರ್ ಡಿ. ವಿ. ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿ, ಔಷಧೀಯ ಸಸ್ಯಗಳ ಪರಿಚಯ ಹಾಗೂ ದೈನಂದಿನ ಜೀವನದಲ್ಲಿ ಸಸ್ಯಗಳ ಪಾತ್ರವನ್ನು ತಿಳಿಸಿ ಶುಭ ಹಾರೈಸಿದರು. ಮೂಲಿಕವನದಲ್ಲಿ ಹಲವು ಔಷಧಿಯುಕ್ತ ಸಸ್ಯಗಳನ್ನು ನೆಡಲಾಯಿತು. ನಂತರ ವಿದ್ಯಾರ್ಥಿಗಳು ಉಪನ್ಯಾಸಕರು ವಿವಿಧ ಬಗೆಯ ಸಸ್ಯಗಳನ್ನು ಮೂಲಿಕವನದಲ್ಲಿ ನೆಟ್ಟರು. ಕಾರ್ಯಕ್ರಮದಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

See also  ಸುಳ್ಯ: ಅ.22ರಂದು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ ಉದ್ಯೋಗ ಮೇಳ, ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget