ನ್ಯೂಸ್ ನಾಟೌಟ್: ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ನಂದ ಕುಮಾರ್ ರವರ ಪುತ್ರ ವೈದ್ಯ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ನಿಧನರಾಗಿದ್ದಾರೆ.
ಮಂಗಳೂರಿನ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ದಂತ ವಿಜ್ಞಾನ ಕಲಿಯುತ್ತಿದ್ದ ಆಸ್ತಿಕ್ ರಾಘವ್ ಇಂದು ಕೇರಳದ ಕಣ್ಣೂರಿನಲ್ಲಿ ಕೆರೆಯೊಂದರ ನೀರಲ್ಲಿ ಮುಳುಗಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಘಟನೆ..?
ಮಂಗಳೂರಿನಿಂದ ತನ್ನ ಸಹಪಾಠಿಯೊಂದಿಗೆ ಕೇರಳದ ಕಣ್ಣೂರಿಗೆ ಆಸ್ತಿಕ್ ಹೋಗಿದ್ದರು. ಸ್ನೇಹಿತನ ಮನೆಗೆ ಹೋಗಿದ್ದ ವೇಳೆ ಅವರು ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ಕಾಲು ಜಾರಿ ನೀರಲ್ಲಿ ಮುಳುಗಿದ್ದಾರೆ. ಡಾ.ನಂದ ಕುಮಾರ್ ರವರು ತಮ್ಮ ಮನೆಯವರು ಈಗ ಘಟನಾ ಸ್ಥಳಕ್ಕೆ
ಹೋಗಿದ್ದಾರೆ.