ಶಿಕ್ಷಣಸುಳ್ಯ

ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ CME ಸಭೆ, Neuro Gut Nexus – 2024

ನ್ಯೂಸ್ ನಾಟೌಟ್ : ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶರೀರಶಾಸ್ತ್ರ(physiology) ವಿಭಾಗದಿಂದ ಶುಕ್ರವಾರ CME ಸಭೆ ನಡೆಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ ಚಿದಾನಂದ ಅವರು ಶರೀರ ಶಾಸ್ತ್ರದ ಮಹತ್ವದ ಬಗ್ಗೆ ವಿವರಿಸಿದರು.

ಮುಖ್ಯ ಅಥಿತಿಯಾಗಿ ಡಾ| ಸಂಧ್ಯಾ ಟಿ ಅವಧಾನಿ ಪಾಲ್ಗೊಂಡಿದ್ದರು. ಸಭೆಯು ದೀಪ ಬೆಳಗುವುದರೊಂದಿಗೆ ಪ್ರಾರಂಭಗೊಂಡಿತು. ನಂತರ ಕೆ.ವಿ.ಜಿ.ಮ್.ಸಿ.ಎಚ್. ಡೀನ್, ಡಾ| ನೀಲಾಂಬಿಕೈ ನಟರಾಜನ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.

ಡಾ| ದಾಮೋಧರ್ ಡಿ ವಂದಿಸಿ, ರಕ್ಷತಾ ರಮೇಶ್ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು. ನಂತರ ಕಾರ್ಯಕ್ರಮದ ಕೇಂದ್ರ ಬಿಂದು ನುರಿತ ವೈದ್ಯರುಗಳಿಂದ ವೈಜ್ಞಾನಿಕ ಅಧಿವೇಶನ ನಡೆಯಿತು.

ತಮಿಳುನಾಡಿನ ತಿರುವನ್ನಮಲೈ ಮೆಡಿಕಲ್ ಕಾಲೇಜಿನ ಶರೀರಶಾಸ್ತ್ರ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ| ಪ್ರೇಮ್ ಬಳಗೂರು, ಹಿರಿಯ ಸಹಾಯಕ ಪ್ರಾಧ್ಯಾಪಕರು, ಡಾ| ಅರುಣ ಯಡಿಯಾಳ್, ಪ್ರಾಧ್ಯಾಪಕರು, ಮನೋವೈದ್ಯಶಾಸ್ತ್ರ ವಿಭಾಗ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮಂಗಳೂರು, ಡಾ | ರಾಘವೇಂದ್ರ ಪ್ರಸಾದ, ಕನ್ಸಲ್ಟೆಂಟ್ ಗ್ಯಾಸ್ಟ್ರೋಎಂಟರಾಲಜಿಸ್ಟ್, ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು, ಡಾ| ಕವಿರಾಜ ಉಡುಪ,ಪ್ರಾಧ್ಯಾಪಕರು, ನ್ಯೂರೊಫಿಸಿಯೋಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಭಾಗವಹಿಸಿ ಹಲವಾರು ವಿಷಯಗಳನ್ನು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು.

Related posts

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ: ಸುಳ್ಯ ಎನ್ನೆoಪಿಯುಸಿ ಹುಡುಗರ ತಂಡ ರನ್ನರ್ಸ್

ಸುಳ್ಯ : ರಾಘವ ಮಾಲಕತ್ವದ ‘ಹೋಟೆಲ್ ರೂಪಾ’ ಇಂದಿನಿಂದ ಶುಭಾರಂಭ, ಈ ಹೋಟೆಲ್ ವಿಶೇಷತೆಗಳೇನು ಗೊತ್ತಾ..?

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ -74ನೇ ಗಣರಾಜ್ಯೋತ್ಸವ