ಕೊಡಗು

ಮಡಿಕೇರಿ: ಕೆಜಿಎಸ್‌ ಸ್ಟ್ರೈಕರ್ಸ್‌ ವಿರುದ್ಧ ಎಂಸಿಬಿ ತಂಡಕ್ಕೆ ಗೆಲುವು

ನ್ಯೂಸ್‌ ನಾಟೌಟ್‌: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮಡಿಕೇರಿ ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್‌ -ಟಿ10 ಸೋಮವಾರದ ಜಿಪಿಎಲ್‌ ಕ್ರಿಕೆಟ್‌ ಪಂದ್ಯಾಟದಲ್ಲಿ ಎಂಸಿಬಿ ತಂಡ ಕೆಜಿಎಸ್‌ ಸ್ಟ್ರೈಕರ್ಸ್‌ ವಿರುದ್ಧ ಜಯ ಸಾಧಿಸಿತು.

ಮೊದಲ ಪಂದ್ಯಾಟದಲ್ಲಿ ಎಂಸಿಬಿ ತಂಡ ಟಾಸ್ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ಕೆಜಿಎಸ್‌ ಸ್ಟ್ರೈಕರ್ಸ್‌ ನಿಗದಿತ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 92 ರನ್‌ಗಳನ್ನು ಗಳಿಸಿತು. ಐಕಾನ್ ಆಟಗಾರ ನಯನ್ ಚೆರಿಯಮನೆ ವೈಯಕ್ತಿಕ 32 (18 ಬಾಲ್) ರನ್‌ಗಳನ್ನು ತಮ್ಮ ಖಾತೆಗೆ ಸೇರಿಸಿದರು. ಎಂಸಿಬಿ ತಂಡದ ಐಕಾನ್ ಆಟಗಾರ ಕೊಂಬಾರನ ಹರ್ಷ 3 ವಿಕೆಟ್ ಕಬಳಿಸಿದರು.

ನಂತರ ಬ್ಯಾಟ್ ಮಾಡಿದ ಎಂಸಿಬಿ ತಂಡ 9 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 94 ರನ್‌ಗಳೊಂದಿಗೆ ಗೆಲುವಿನ ನಗೆ ಬೀರಿದರು. ಎಂಸಿಬಿ ಆಟಗಾರ ಕುಶ್ವಂತ್ ಕೋಳಿಬೈಲ್ 37 (17) ರನ್ ಗಳಿಸುವ ಮೂಲಕ ಸೋಲಿನೆಡೆಗೆ ಜಾರುತ್ತಿದ್ದ ತಂಡವನ್ನು ಜಯದ ದಡ ಸೇರಿಸಿದರು. ಹರ್ಷ ಕೊಂಬಾರನ 3 ವಿಕೆಟ್ ಕಬಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Related posts

ಚಿನ್ನದಂಗಡಿ ಶುಭಾರಂಭ ದಿನವೇ ಮಾಲೀಕ ಸಾವು ಪ್ರಕರಣ: ಕೊನೆಗೂ ಪೋಸ್ಟ್ ಮಾರ್ಟಮ್ ವರದಿಯಿಂದ ಹೊರಬಿತ್ತು ಸತ್ಯ ಸಂಗತಿ!

ಮಡಿಕೇರಿ: ಬಸ್ ನೊಳಗೆ ಬಿದ್ದು ಸಿಕ್ಕಿದ ಮೊಬೈಲ್ ಅನ್ನು ವಾರಿಸುದಾರರಿಗೆ ಹಿಂದಿರುಗಿಸಿದ KSRTC ಕಂಡಕ್ಟರ್ , ಪ್ರಾಮಾಣಿಕತನ ಮೆರೆದ ನಿರ್ವಾಹಕನ ಕಾರ್ಯಕ್ಕೆ ಶ್ಲಾಘನೆ

ಕರಿಕೆ ಸರ್ಕಾರಿ ಪ್ರೌಢಶಾಲೆಯಲ್ಲಿ 76 ನೇ ಸ್ವಾತಂತ್ಯ ದಿನಾಚರಣೆ, ದೇಶ ಪ್ರೇಮದ ಸಂದೇಶ ಸಾರಿದ ವಿದ್ಯಾರ್ಥಿಗಳು