Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಮ್ಯಾನ್ಮಾರ್ ಭೂಕಂಪದಲ್ಲಿ ಬಹುಮಹಡಿಗಳ ಮೇಲೆ ಸ್ವಿಮಿಂಗ್ ಪೂಲ್ ನಲ್ಲಿ ಸಿಲುಕಿದ್ದ ಜೋಡಿಯ ವಿಡಿಯೋ ವೈರಲ್..! ಭಯಾನಕ ಅಲೆಗಳಿಗೆ ಬೆಚ್ಚಿಬಿದ್ದ ಜೋಡಿ..!

955

ನ್ಯೂಸ್‌ ನಾಟೌಟ್: ಮ್ಯಾನ್ಮಾರ್ ​ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿ ಸಾವಿರಾರು ಸಾವು ನೋವುಗಳಾಗಿವೆ. ಈಗ ಅಲ್ಲಿನ ಕೆಲ ವಿಡಿಯೋಗಳು ವೈರಲ್ ಆಗುತ್ತಿದ್ದು, ಬ್ಯಾಂಕಾಕ್‌ ನ ಹೋಟೆಲ್‌ ನ ಮೇಲ್ಛಾವಣಿಯ ಸ್ವಿಮಿಂಗ್ ಪೂಲ್ ​ನಲ್ಲಿ ನಿಶ್ಚಿಂತೆಯಿಂದ ಮಲಗಿದ್ದ ಜೋಡಿ ಭೂಕಂಪದಿಂದ ತತ್ತರಿಸಿ ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಶಾಂತವಾಗಿದ್ದ ಈಜುಕೊಳವು ವಿಪತ್ತಾಗಿ ಮಾರ್ಪಟ್ಟ ಭಯಾನಕ ಕ್ಷಣವನ್ನು ವಿಡಿಯೋದಲ್ಲಿ ಸೆರೆಯಾಗಿದೆ. ಈ ದೃಶ್ಯದಲ್ಲಿ ಒಬ್ಬ ವ್ಯಕ್ತಿ ಕೊಳದ ಪಕ್ಕದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೆ, ದಂಪತಿ ನೀರಿನಲ್ಲಿ ಲೌಂಜರ್‌ ಗಳ ಮೇಲೆ ತೇಲುತ್ತಿರುವುದನ್ನು ಕಾಣಬಹುದು.

ಭೂಕಂಪ ಸಂಭವಿಸುತ್ತಿದ್ದಂತೆ, ನೀರು ಏರಿಳಿತಗೊಳ್ಳಲು ಪ್ರಾರಂಭಿಸಿತು. ಕೆಲವೇ ಸೆಕೆಂಡುಗಳಲ್ಲಿ, ಬೃಹತ್ ಅಲೆಗಳು ರೂಪುಗೊಂಡವು, ಕೊಳದ ಅಂಚುಗಳ ಮೇಲೆ ಅಪ್ಪಳಿಸಿದವು. ಹೇಗೋ ಜೀವ ಉಳಿಸಿಕೊಂಡು ಆ ಇಬ್ಬರು ಅಲ್ಲಿಂದ ಓಡಿದ್ದಾರೆ

See also  ಸುಳ್ಯ:ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget