ಕ್ರೀಡೆ/ಸಿನಿಮಾವೈರಲ್ ನ್ಯೂಸ್

ವಿಮಾನದಲ್ಲಿ ನೀರು ಕುಡಿದು ಅಸ್ವಸ್ಥರಾದ್ರಾ ಮಯಾಂಕ್‌ ಅಗರ್ವಾಲ್‌..? ಕ್ರಿಕೆಟಿಗ ಆಸ್ಪತ್ರೆಗೆ ದಾಖಲು

237

ನ್ಯೂಸ್ ನಾಟೌಟ್: ವಿಮಾನದಲ್ಲಿ ಸೀಟಿನ ಮುಂಭಾಗ ಇಟ್ಟಿದ್ದ ನೀರನ್ನು ಕುಡಿದು ಅಸ್ವಸ್ಥರಾದ ಕಾರಣ ಕರ್ನಾಟಕದ ರಣಜಿ (Karnataka Ranji) ಕ್ಯಾಪ್ಟನ್‌ ಮಯಾಂಕ್‌ ಅಗರ್ವಾಲ್‌ (Mayank Agarwal) ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ನಾಟಕ ರಣಜಿ ತಂಡದೊಂದಿಗೆ ತ್ರಿಪುರಾದ ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ಅಗರ್ವಾಲ್‌ ಪ್ರಯಾಣ ಬೆಳೆಸಿದ್ದರು. ವಿಮಾನದಲ್ಲಿ ಕುಳಿತಿದ್ದ ಮಯಾಂಕ್‌, ಸೀಟಿನ ಮುಂಭಾಗದಲ್ಲಿ ಇಟ್ಟಿದ್ದ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದಾರೆ.

ನೀರು ಕುಡಿಯುತ್ತಿದ್ದಂತೆ ಮಯಾಂಕ್‌ ನಾಲಿಗೆ, ಬಾಯಿಗೆ ಸುಟ್ಟ ಅನುಭವವಾಗಿದೆ. ಪರಿಣಾಮ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅಗರ್ತಲಾದ ಐಎಲ್‌ಎಸ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಯಿತು.

ತ್ರಿಪುರ ವಿರುದ್ಧ ಸೋಮವಾರ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿತ್ತು. ಮುಂದಿನ ಪಂದ್ಯಕ್ಕಾಗಿ ಸೂರತ್‌ಗೆ ಪ್ರಯಾಣ ಬೆಳೆಸಲಾಗಿತ್ತು ಎಂದು ವರದಿ ತಿಳಿಸಿದೆ. ಈ ಘಟನೆಯ ಬಳಿಕ ಉಳಿದವರು ಸೂರತ್ ಗೆ ತೆರಳಿದ್ದಾರೆ.

https://newsnotout.com/2024/01/flag-issue-news-benglore/
See also  ವಿಧವೆಯನ್ನು ಮದುವೆಯಾಗಿದ್ದ ಪೊಲೀಸ್ ವಿರುದ್ಧ ಕೇಸ್..! ಕೊಲೆ ಪ್ರಕರಣವೊಂದರಲ್ಲಿ ಠಾಣೆಗೆ ಬಂದಿದ್ದ ಮಹಿಳೆ ಜೊತೆ ಮದುವೆ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget