Latestರಾಜ್ಯವೈರಲ್ ನ್ಯೂಸ್ಶಿಕ್ಷಣ

ಮೇ ಮೊದಲ ವಾರದಲ್ಲಿ SSLC ಪರೀಕ್ಷೆ ಫಲಿತಾಂಶ, ಎಸ್.ಎಮ್.ಎಸ್ ಮೂಲಕವೂ ಫಲಿತಾಂಶ ತಿಳಿಯಬಹುದು

704

ನ್ಯೂಸ್ ನಾಟೌಟ್: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ ಎಸ್ಎಸ್​​ಎಲ್​ಸಿ ಪರೀಕ್ಷೆ-1 ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗರಾಪ್ಪ ಹೇಳಿದ್ದಾರೆ.

ಈಗಾಗಲೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನ ಆರಂಭವಾಗಿದೆ. ಈ ಬಾರಿಯ ಎಸ್​ ಎಸ್​ ಎಲ್ ​ಸಿ ಪರೀಕ್ಷೆ- 1 ನಡೆದಿದ್ದು 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು. 15,881 ಶಾಲೆಗಳ ವಿದ್ಯಾರ್ಥಿಗಳು 2,818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು.
ಕಳೆದ ವರ್ಷ, ಕೆಎಸ್ಇಎಬಿ ಮೇ 9 ರಂದು SSLC ಪರೀಕ್ಷೆ-1 ಫಲಿತಾಂಶಗಳನ್ನು ಪ್ರಕಟಿಸಿತ್ತು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) SSLC ಅಥವಾ 10 ನೇ ತರಗತಿಯ ಬೋರ್ಡ್ ಪರೀಕ್ಷಾ ಫಲಿತಾಂಶವನ್ನು ಅಧಿಕೃತ ವೆಬ್‌ ಸೈಟ್‌ https://kseab.karnataka.gov.in ಅಥವಾ https://karresults.nic.in/ ನಲ್ಲಿ ಪ್ರಕಟಿಸಲಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಫಲಿತಾಂಶ ಪಡೆಯಬಹುದಾಗಿದೆ.

SMS ಮೂಲಕವೂ ಫಲಿತಾಂಶ ಪರಿಶೀಲಿಸಬಹುದಾಗಿದೆ. KAR 10 ಅಂತ ಬರೆದು ಸ್ಪೇಸ್​ ಬಿಟ್ಟು ನೋಂದಣಿ ಸಂಖ್ಯೆ ಟೈಪ್​ ಮಾಡಿ 56263ಗೆ ಸಂದೇಶ ಕಳುಹಿಸಿ. ಫಲಿತಾಂಶವನ್ನು ವಿದ್ಯಾರ್ಥಿಗಳು ಅದೇ ಮೊಬೈಲ್​ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಡ್ರಗ್ಸ್ ಅಡಿಕ್ಟ್ ಆಗಿದ್ದ ಸ್ಟಾರ್‌ ನಟನಿಂದ ಕಿರುಕುಳ ಆರೋಪ..! ಮಲಯಾಳಂ ನಟಿ ಶಾಕಿಂಗ್ ಹೇಳಿಕೆ..!

ಬಿಗ್ ಬಾಸ್ ಖ್ಯಾತಿಯ ರಜತ್‌ ಕಿಶನ್ ಮತ್ತೆ ಅರೆಸ್ಟ್..! ಆರೋಪಿ ರಜತ್ ವಿರುದ್ಧ ವಾರೆಂಟ್ ಹೊರಡಿದ್ದ ನ್ಯಾಯಾಲಯ..!

See also  ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್‌ ರೇವಣ್ಣ ಬಂಧನ..! ಅಜ್ಞಾತ ಸ್ಥಳದಲ್ಲಿ ತಡರಾತ್ರಿ 1:30ರ ವರೆಗೂ ಪೊಲೀಸ್ ವಿಚಾರಣೆ
  Ad Widget   Ad Widget   Ad Widget   Ad Widget   Ad Widget   Ad Widget