ಕ್ರೈಂರಾಜ್ಯ

ಭಕ್ತರ ವೇಷದಲ್ಲಿ ಮಠಕ್ಕೆ ಬಂದು ಚಿನ್ನ, ಹಣ ದೋಚಿದ ಕಳ್ಳರು..! ಪಿಸ್ತೂಲ್‌ ಹಿಡಿದು ಬೆದರಿಕೆ ಹಾಕಿದ್ದಾರೆ ಎಂದ ಸ್ವಾಮೀಜಿ..!

ನ್ಯೂಸ್ ನಾಟೌಟ್: ಮಠಕ್ಕೆ ಭಕ್ತರ ವೇಷದಲ್ಲಿ ಬಂದಿದ್ದ ಅಪರಿಚಿತರಿಬ್ಬರು ₹40 ಲಕ್ಷ ಮೌಲ್ಯದ ನಗನಾಣ್ಯ ಲೂಟಿ ಮಾಡಿ ಪರಾರಿಯಾದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಇಳಕಲ್ಲ ವಿಜಯ ಮಹಾಂತೇಶ್ವರ ಮಠದಲ್ಲಿ ನಡೆದಿದೆ.

ಗುರುವಾರ(ಜುಲೈ 4) ಮಧ್ಯರಾತ್ರಿ ಮಠಕ್ಕೆ ಭಕ್ತರ ವೇಷದಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳು ಮಠದೊಳಗೆ ಬಂದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಪಿಸ್ತೂಲ್‌ ಹಿಡಿದು ಜೀವ ಬೆದರಿಕೆ ಹಾಕಿ ಕಪಾಟು ಹಾಗೂ ಟ್ರಂಕ್ ಗಳಲ್ಲಿದ್ದ 7 ತೊಲ ಚಿನ್ನ, 10 ಕೆ.ಜಿ ಬೆಳ್ಳಿ, ಅಂದಾಜು ₹20 ಲಕ್ಷ ನಗದು ದೋಚಿಕೊಂಡು ಹೋಗಿದ್ದಾರೆ.

ಪಾದ ಮತ್ತು ಇಷ್ಟಲಿಂಗ ಪೂಜೆಗೆ ಬಳಸುವ ಬೆಳ್ಳಿ ಸಾಮಗ್ರಿಗಳು, ಚಿನ್ನದ ಕರಡಿಗೆ ಮತ್ತು ಸುತ್ತುಂಗುರಗಳನ್ನು ಲೂಟಿ ಮಾಡಿಕೊಂಡು ಹೋಗಿದ್ದಾರೆ ಎಂದು ಶಾಖಾ ಮಠದ ಸಿದ್ಧಲಿಂಗ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶಬಾಬು , ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.

Click 👇

Related posts

ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ನ ದೂರುದಾರೆಯ ನಿಗೂಢ ಸಾವಿನ ಬಗ್ಗೆ ಮತ್ತೆ ತನಿಖೆ..? ಮಹಿಳಾ ಆಯೋಗದ ಅಧ್ಯಕ್ಷೆಯಿಂದ ರಹಸ್ಯ ಬಯಲು..!

ಮಗುವಿನ ಜೀವ ರಕ್ಷಣೆಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ಮೇಲೆ ದುಷ್ಕರ್ಮಿಗಳಿಂದ ದಾಳಿ, ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ, ಇಲ್ಲಿದೆ ವಿಡಿಯೋ

DYSP cyber case: ಡಿವೈಎಸ್‌ಪಿ ಖಾತೆಯಿಂದಲೇ 15 ಲಕ್ಷ ರೂ. ದೋಚಿದ ಸೈಬರ್ ಕಳ್ಳರು..! ಮಡಿಕೇರಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದ ಮುರಳೀಧರ್ ವಂಚನೆಗೆ ಒಳಗಾಗಿದ್ದೇಗೆ..?