ನ್ಯೂಸ್ ನಾಟೌಟ್: ಶಬರಿಮಲೆ ತೀರ್ಥಯಾತ್ರೆಯಲ್ಲಿ ಪಂಪಾ ನದಿಗೆ ವಿಶೇಷ ಸ್ಥಾನವಿದೆ.ಮಣಿಕಂಠನ ಸನ್ನಿಧಿಗೆ ಬರುವ ಭಕ್ತರು ಮೊದಲು ಈ ನದಿಯಲ್ಲಿ ಸ್ನಾನ ಮಾಡಿ ನಂತರ ದೇವರ ದರ್ಶನ ಮಾಡುತ್ತಾರೆ.ಅಯ್ಯಪ್ಪ ಭಕ್ತರು ಭಗವಂತನ ದರ್ಶನಕ್ಕೂ ಮುನ್ನ ಈ ನದಿಯಲ್ಲಿ ಸ್ನಾನ ಮಾಡುವುದು ಸಂಪ್ರದಾಯ. ಈ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.
ಇಷ್ಟು ಮಾತ್ರವಲ್ಲದೇ , ಪಂಪಾ ನದಿಯು ರಾಮಾಯಣದಲ್ಲಿಯೂ ವಿಶೇಷ ಉಲ್ಲೇಖವನ್ನು ಹೊಂದಿದೆ. ರಾಮನು ತನ್ನ ವನವಾಸದ ಸಮಯದಲ್ಲಿ ಪಂಬಾ ನದಿಯ ದಡದಲ್ಲಿರುವ ಶಬರಿ ಆಶ್ರಮಕ್ಕೆ ಭೇಟಿ ನೀಡಿದ್ದ ಎಂದು ಹೇಳಲಾಗುತ್ತದೆ. ಇಲ್ಲಿ ಪೂರ್ವಜರ ವಿಧಿವಿಧಾನಗಳನ್ನು ಮಾಡುವವರಿಗೆ ಏಳು ತಲೆಮಾರುಗಳವರೆಗೆ ಮೋಕ್ಷ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ.
ಇಂತಹ ಹಲವಾರು ಮಹತ್ವ ಹೊಂದಿರುವ ಈ ನದಿಯಲ್ಲಿ ಇದೀಗ ಅಪರೂಪದ ದೃಶ್ಯಗಳು ಕಂಡುಬಂದಿವೆ. ಪಂಪಾದಲ್ಲಿ ಅಪರೂಪದ ಮತ್ಸ್ಯಕನ್ಯೆಯೊಂದು ಕಾಣಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಹರಿಯುವ ನೀರಿನಲ್ಲಿ ಮತ್ಸ್ಯಕನ್ಯೆ ಈಜುವುದನ್ನು ನೀವು ನೋಡಬಹುದು. ಇದಕ್ಕೆ ಸಂಬಂಧಿಸಿದ ಒಂದು ರೀಲ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಇದನ್ನು @arjun_astrolgy ಎಂಬ ಯೂಟ್ಯೂಬ್ ಚಾನೆಲ್‌ನಿಂದ ಪೋಸ್ಟ್ ಮಾಡಲಾಗಿದೆ.
ಇದನ್ನು ಇಲ್ಲಿಯವರೆಗೆ ನೋಡಿದ ಅನೇಕ ಜನರು ಇದು ನಿಜವೆಂದು ಭಾವಿಸಿದ್ದಾರೆ. ಆದರೆ ಕೆಲವರು ಇದು AI-ರಚಿತ ವೀಡಿಯೊ ಎಂದು ಹೇಳಲಾಗುತ್ತದೆ.. ಆದರೆ ಇದರ ಸತ್ಯಾಸತ್ಯತೆ ಏನು ಎಂದು ಇನ್ನೂ ತಿಳಿದು ಬಂದಿಲ್ಲ.