Latestರಾಜ್ಯವೈರಲ್ ನ್ಯೂಸ್

ಸಾಮೂಹಿಕ ವಿವಾಹದಲ್ಲಿ 24 ಜೋಡಿಗೆ ಮಾಂಗಲ್ಯ ವಿತರಿಸಿದ ನಟ ದರ್ಶನ್ ಪತ್ನಿ..! ನಟ ಧನ್ವೀರ್, ಚಿಕ್ಕಣ್ಣ ಭಾಗಿ..!

1.1k
Spread the love

ನ್ಯೂಸ್‌ ನಾಟೌಟ್ : ಮಂಡ್ಯದ ಪಾಂಡವಪುರದಲ್ಲಿ ಬೇಬಿಬೆಟ್ಟ ಜಾತ್ರಾ ಮಹೋತ್ಸವದಲ್ಲಿ ಇಂದು (ಮಾ.2) ನಡೆದ ಸರಳ ಸಾಮೂಹಿಕ ವಿವಾಹದಲ್ಲಿ 24 ಮಂದಿ ನವ ವಧು-ವರರು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನವಜೋಡಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಂಗಲ್ಯ ನೀಡಿ ಶುಭಕೋರಿದರು.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಪ್ರತಿ ವರ್ಷ ಗೋವುಗಳ ಜಾತ್ರೆ ವೇಳೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತದೆ. ಅದರಂತೆ ಈ ವರ್ಷವೂ ಸಾಮೂಹಿಕ ವಿವಾಹ ನೆರವೇರಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಂಗಲ್ಯ ವಿತರಣೆ ಮಾಡಿದರು. ನಟ ಧನ್ವೀರ್ ವಾಚ್ ವಿತರಣೆ ಮಾಡಿದ್ದಾರೆ, ಹಾಸ್ಯನಟ ಚಿಕ್ಕಣ್ಣ ಸೀರೆ, ಪಂಚೆ-ಶರ್ಟ್ ವಿತರಣೆ ಮಾಡಿದರು.

ಶ್ರೀರಾಮಾಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಮ್ಮುಖದಲ್ಲಿ ಬೆಳಗ್ಗೆ 10:10ರ ಶುಭಲಗ್ನದಲ್ಲಿ ನವ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಾಂಗಲ್ಯಧಾರಣೆಯಾಗುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ನೂರಾರು ಸಂಖ್ಯೆಯ ಸಾರ್ವಜನಿಕರು ಅಕ್ಷತೆ ಹಾಕುವ ಮೂಲಕ ವಧು-ವರರಿಗೆ ಆಶೀರ್ವಾದಿಸಿದರು.

ವಿಜಯಲಕ್ಷ್ಮಿದರ್ಶನ್ ಮಾತನಾಡಿ, ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ದಾಂಪತ್ಯ ಜೀವನಕ್ಕೆ ಕಾಲಿಟುತ್ತಿರುವುದು ಒಳ್ಳೆಯ ನಿರ್ಧಾರ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಜೀವನ ಸುಖ, ನೆಮ್ಮದಿ ದೊರಕಲಿ, ರೈತರು ಮತ್ತು ರೈತರ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.

See also  ಚಿರತೆಯ ಬಾಲ ಹಿಡಿದು ಬಲೆಗೆ ಎಸೆದ ಯುವಕ..! ಯುವಕನ ಧೈರ್ಯ ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಶಾಕ್..!
  Ad Widget   Ad Widget   Ad Widget   Ad Widget