ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮಸೀದಿ ಸಮೀಕ್ಷೆ ವೇಳೆ ಹಿಂಸಾಚಾರ ಪ್ರಕರಣ: ಸಂಸದ ಸೇರಿ 400 ಮಂದಿ ವಿರುದ್ಧ ಎಫ್‌.ಐ.ಆರ್..! ಡ್ರೋನ್ ದೃಶ್ಯಗಳನ್ನು ಬಳಸಿಕೊಂಡು ಹಿಂಸಾಚಾರ ನಡೆಸಿದವರನ್ನು ಸೆರೆಹಿಡಿದ ಪೊಲೀಸರು..!

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಸಂಭಾಲ್‌ ನಲ್ಲಿ ಮೊಘಲರ ಕಾಲದ ಶಾಹಿ ಜಾಮಾ ಮಸೀದಿ ಸಮೀಕ್ಷೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸಂಸದ ಸೇರಿ 400 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಸಂಬಂಧ ಕನಿಷ್ಠ 25 ಜನರನ್ನು ಬಂಧಿಸಲಾಗಿದೆ. ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯಲ್ಲಿ ಭಾನುವಾರ ಬೆಳಗ್ಗೆ ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆಗೆ ಅಧಿಕಾರಿಗಳ ತಂಡ ತೆರಳಿತ್ತು. ಈ ವೇಳೆ ಸ್ಥಳೀಯರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಪ್ರತಿಭಟನಾಕಾರರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿಚಾರ್ಜ್‌ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸರುವ ಪೊಲೀಸ್ ವರಿಷ್ಠಾಧಿಕಾರಿ ಕ್ರಿಶನ್ ಕುಮಾರ್, ಸುಮಾರು 20 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ತಲೆಗೆ ಪೆಟ್ಟಾಗಿರುವ ಕಾನ್‌ ಸ್ಟೆಬಲ್ ಸ್ಥಿತಿ ಚಿಂತಾಜನಕವಾಗಿದೆ. ಈ ಹಿಂದೆ ಬಾರ್ಕ್ ನೀಡಿದ್ದ ಹೇಳಿಕೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದ್ದಾರೆ.

ಶಾಹಿ ಜಾಮಾ ಮಸೀದಿ ಮೂಲತಃ ಹರಿ ಹರ್ ಮಂದಿರ ಎಂದು ವಕೀಲ ವಿಷ್ಣು ಶಂಕರ್ ಜೈನ್ ಎಂಬವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯ ವೇಳೆ ಸಮೀಕ್ಷೆಗೆ ಆದೇಶಿಸಲಾಗಿದೆ.

ಪೊಲೀಸರು ಡ್ರೋನ್ ದೃಶ್ಯಗಳನ್ನು ಬಳಸಿಕೊಂಡು ಹಿಂಸಾಚಾರ ನಡೆಸಿದವರನ್ನು ಗುರುತಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Click

https://newsnotout.com/2024/11/ipl-kannada-news-rishab-panth-kannada-news-viral-issue-ipl-bidding/
https://newsnotout.com/2024/11/kannada-news-business-man-and-live-in-relationship-issue/
https://newsnotout.com/2024/11/mysore-chamundeshwari-gold-ratha-kannada-news/
https://newsnotout.com/2024/11/kollur-kantara-kannada-news-mini-bus-viral-news-kdd/
https://newsnotout.com/2024/11/swiggi-kannada-news-office-viral-news-viral-post-office/
https://newsnotout.com/2024/11/google-map-kannada-news-marriage-map-kannada-news-marriage/

Related posts

ಕೊಡಗು ಭೂಕುಸಿತದಲ್ಲಿ ಅನಾಥವಾಗಿದ್ದ ‘ಬ್ಲ್ಯಾಕಿ ಶ್ವಾನ’ ಸುಳ್ಯದಿಂದ ದೂರದ ಊರಿಗೆ ಶಿಫ್ಟ್, ವರ್ಗಾವಣೆ ವೇಳೆ ಪ್ರೀತಿಯ ಶ್ವಾನವನ್ನೂ ಜೊತೆಗೆ ಕೊಂಡೊಯ್ದ ಅಧಿಕಾರಿ..!

“CM ಸಿದ್ದರಾಮಯ್ಯನವರೇ ಎಷ್ಟೇ ಹುಡುಕಾಡಿದ್ರೂ ಹೆಣ್ಣೇ ಸಿಕ್ತಿಲ್ಲ, ದಯವಿಟ್ಟು ‘ಕನ್ಯೆಭಾಗ್ಯ ಕೊಡಿ”, ಜಾಲತಾಣದಲ್ಲಿ ಏನಿದು ಯುವಕನ ವಿಚಿತ್ರ ಮನವಿ

ರಾತ್ರಿ ಕರಾವಳಿಗೆ ಅಪ್ಪಳಿಸಿದ ‘ರೆಮಲ್’ ಚಂಡಮಾರುತ..! 1 ಲಕ್ಷ ಮಂದಿಯ ಸ್ಥಳಾಂತರ