ಕ್ರೈಂಬೆಂಗಳೂರು

ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ..! 7 ವಿದೇಶಿ ಮಹಿಳೆಯರನ್ನು ರಕ್ಷಿಸಿದ ಪೊಲೀಸರು..!

ನ್ಯೂಸ್ ನಾಟೌಟ್: ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಯಲಂಹಕದ ರೋರಾ ಲಕ್ಸುರಿ ಥಾಯ್ ಸ್ಪಾ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಇಂದು(ಫೆ.25) ರಂದು ನಡೆದಿದೆ.

ಏಳು ಮಂದಿ ವಿದೇಶಿ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಯಲಹಂಕ ಉಪ ನಗರದ ಬಿ ಸೆಕ್ಟರ್​ನಲ್ಲಿರುವ ಕಟ್ಟಡದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಥಾಯ್ಲೆಂಡ್ ದೇಶದ ಮಹಿಳೆಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿರುವುದು ಗೊತ್ತಾಗಿದೆ. ಟೂರಿಸ್ಟ್ ವೀಸಾ ಹಾಗೂ ಬಿಸ್ನೆಸ್ ವೀಸಾ ಮೂಲಕ ಆರೋಪಿಗಳು ಮಹಿಳೆಯರನ್ನು ಕರೆ ತಂದಿರುವುದು ತನಿಖೆಯಲ್ಲಿ ಬಯಲಾಗಿದೆ. ಆಂಜನೇಯ ಗೌಡ, ಆಂಜನೇಯ ರೆಡ್ಡಿ ಹಾಗೂ ಹರೀಶ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

Related posts

ಬಂಟ್ವಾಳದಲ್ಲಿ ಹೆಚ್ಚಾದ ಮಾದಕ ವಸ್ತುಗಳ ಘಾಟು..! ಆರೋಪಿಯ ಬಂಧನ

ಪಂಜ: ಉಪ್ಪಿನಂಗಡಿಯಲ್ಲಿ ಆತ್ಮಹತ್ಯೆಗೆ ಶರಣಾದ 7ನೇ ತರಗತಿ ಬಾಲಕ, ಸೈಕಲ್ ರಿಪೇರಿ ಮಾಡಿಕೊಂಡುವಂತೆ ಹಠ ಹಿಡಿದಿದ್ದ ಬಾಲಕ ಮಾಡಿಕೊಂಡಿದ್ದೇನು..?

ಕಾರ್ಕಳ: ರಾತ್ರಿ ಬಹುಮಹಡಿ ಕಟ್ಟಡದೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟ..! ಮನೆಯ ಮೇಲ್ಭಾಗಕ್ಕೆ ಓಡಿ ಸಹಾಯಕ್ಕಾಗಿ ರಸ್ತೆಯಲ್ಲಿ ಹೋಗುವವರನ್ನು ಕರೆದ ಮನೆಯವರು..!