ಕ್ರೈಂವೈರಲ್ ನ್ಯೂಸ್ಸಿನಿಮಾ

‘ಮಾರ್ಟಿನ್’ ಸಿನಿಮಾ ಬಗ್ಗೆ ರಿವ್ಯೂವ್ ವಿವಾದದ ಬೆನ್ನಲ್ಲೇ ಮತ್ತೊಂದು ಪ್ರಕರಣದಲ್ಲಿ ರೀಲ್ಸ್ ಸ್ಟಾರ್‌ ಸುಧಾಕರ್ ಅರೆಸ್ಟ್..! ಇಲ್ಲಿದೆ ಸಂಪೂರ್ಣ ಮಾಹಿತಿ

254

ನ್ಯೂಸ್ ನಾಟೌಟ್: ಕನ್ನಡದ ರೀಲ್ಸ್ ಸ್ಟಾರ್ ಸುಧಾಕರ ಇತ್ತೀಚೆಗೆ ಮಾರ್ಟಿನ್‌ ಸಿನಿಮಾ ರಿವ್ಯೂವ್ ಮೂಲಕ ಭಾರೀ ವೈರಲ್‌ ಆಗಿದ್ದರು. ರೀಲ್ಸ್ ಸ್ಟಾರ್‌ ಸುಧಾಕರ್ ಮಾರ್ಟಿನ್ ಸಿನಿಮಾ ಚೆನ್ನಾಗಿಲ್ಲ, ಕಥೆ ಚೆನ್ನಾಗಿಲ್ಲ, ಸಿನಿಮಾವೇ ಚೆನ್ನಾಗಿಲ್ಲ ಎಂದು ವಿಡಿಯೋ ಮಾಡಿದ್ದರು. ಈ ಬೆನ್ನಲ್ಲೇ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದ ಧ್ರುವ ಸರ್ಜಾ ಫ್ಯಾನ್ಸ್ ಒತ್ತಡಕ್ಕೆ ಆ ವಿಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದರು.

ಇದೀಗ ರೀಲ್ಸ್ ಸ್ಟಾರ್‌ ಸುಧಾಕರ್‌ ಅವರನ್ನು ಮಾದನಾಯಕನ ಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ್ ಗೌಡ ಅವರನ್ನು ಹಲ್ಲೆ ಪ್ರಕರಣವೊಂದರಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಹಲ್ಲೆ ಪ್ರಕರಣ ಒಂದರಲ್ಲಿ ಭಾಗಿಯಾಗಿದ್ದ ಎಂಬ ಕಾರಣಕ್ಕಾಗಿ ಸುಧಾಕರ್ ಅರೆಸ್ಟ್ ಆಗಿದ್ದಾರೆ ಎನ್ನಲಾಗಿದೆ. ಇನ್ನು ಈ ಪ್ರಕರಣ ಸಂಬಂಧ ಸುಧಾಕರ್ ವಿರುದ್ಧ ವಾರೆಂಟ್ ಇಶ್ಯೂ ಕೂಡಾ ಆಗಿತ್ತು. ಈ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸುಧಾಕರ್‌ನನ್ನು ಮಾದನಾಯಕನ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸುಧಾಕರ್‌ನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Click

https://newsnotout.com/2024/10/darshan-thugudeepa-case-bail-issue-highcourt-appeal/
https://newsnotout.com/2024/10/dr-puneethrajkumar-kannada-news-sports-and-scam/
https://newsnotout.com/2024/10/covid-shield-kannada-news-supreme-court-viral-news/
https://newsnotout.com/2024/10/kannada-news-childrens-and-perents-in-agri-land-viral-news/
https://newsnotout.com/2024/10/coconut-tree-kannada-news-photo-viral-sayuktha-hegade/
See also  ಲೋಕಸಭಾ ಚುನಾವಣೆ ಗದ್ದಲದಲ್ಲಿ 'ಸೌಜನ್ಯ' ಹೆಸರು ಮರೆಯಾಗದಿರಲಿ, ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳೇ ಓಟಿಗೆ ಮೊದಲು ನಿಮ್ಮ ನಿಲುವೇನು ತಿಳಿಸಿ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget