Latestಕರಾವಳಿಕ್ರೈಂಪುತ್ತೂರುಬೆಂಗಳೂರು

ಪುತ್ತೂರಿನ ನವವಿವಾಹಿತೆ ಬೆಂಗಳೂರಿನಲ್ಲಿ ಆತ್ಮಹತ್ಯೆ..! ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣು..!

1.1k
Pc Cr: Public Tv
Spread the love

ನ್ಯೂಸ್ ನಾಟೌಟ್: ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ಇಂದು(ಮಾ.03) ನಡೆದಿದೆ.

ಪೂಜಾಶ್ರೀ (23) ನೇಣಿಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ಪೂಜಾಶ್ರೀ ಪುತ್ತೂರಿನ ಕಾಣಿಯೂರು ಗ್ರಾಮದ ಬಾಕಿಮಾರು ನಿವಾಸಿಯಾಗಿದ್ದು, ಬೆಳ್ತಂಗಡಿಯ ಪಡಂಗಡಿ ಬರಾಯ ನಿವಾಸಿ ಪ್ರಕಾಶ್ ಎಂಬವರನ್ನು 10 ತಿಂಗಳ ಹಿಂದೆ ವಿವಾಹವಾಗಿದ್ದರು. ಕೆಲಸ ಅರಸುವ ಸಲುವಾಗಿ ಕಳೆದ ಎರಡು ತಿಂಗಳ ಹಿಂದೆ ಪೂಜಾಶ್ರೀಯನ್ನು ಪತಿ ಪ್ರಕಾಶ್ ಬೆಂಗಳೂರಿನಲ್ಲಿರೋ ತನ್ನ ಸಂಬಂಧಿಕರ ಮನೆಗೆ ಕಳುಹಿಸಿಕೊಟ್ಟಿದ್ದರು ಎನ್ನಲಾಗಿದೆ.

ಸಂಬಂಧಿಕರ ಮನೆಯಲ್ಲೇ ಇದ್ದ ಪೂಜಾಶ್ರೀ ಅಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಜಾಶ್ರೀ ಆತ್ಮಹತ್ಯೆ ಬಗ್ಗೆ ಆಕೆಯ ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಬೆಂಗಳೂರಿನ ಜಾಲಹಳ್ಳಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ‘ದಿ ರಣ್ವೀರ್ ಶೋ’ ಪ್ರಸಾರಕ್ಕೆ ಸುಪ್ರೀಂ ಕೋರ್ಟ್​ ಅನುಮತಿ..! 280 ಜನರಿಗೆ ಉದ್ಯೋಗ ನೀಡಿದ್ದ ರಣ್ವೀರ್ ಅಲಹಾಬಾದಿಯಾಗೆ ರಿಲೀಫ್..!

See also  ರಾತ್ರೋರಾತ್ರಿ ವಿದ್ಯಾರ್ಥಿನಿ ನೇಣಿಗೆ ಶರಣು..! ಒಂಟಿ ಯುವತಿಯ ನಿಗೂಢ ಸಾವಿಗೆ ಕಾರಣವೇನು?
  Ad Widget   Ad Widget   Ad Widget   Ad Widget