ಕೊಡಗು

ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವಿವಾಹಿತ ಮಹಿಳೆಯೊಂದಿಗೆ ಪತಿ ಎಸ್ಕೇಪ್!,ತನ್ನ ಮಗುವನ್ನೂ ಕರೆದೊಯ್ದಿದ್ದಾನೆಂದು ಪತ್ನಿ ಗೋಳಾಟ-ಗಂಡ,ಮಗುವನ್ನು ಹುಡುಕಿಕೊಡುವಂತೆ ಅಂಗಲಾಚಿದ ಪತ್ನಿ

ನ್ಯೂಸ್ ನಾಟೌಟ್ : ವ್ಯಕ್ತಿಯೋರ್ವ ತಾನು ಕಟ್ಕೊಂಡ ಹೆಂಡ್ತಿಯನ್ನು ಬಿಟ್ಟು ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ.

ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯ ಸತೀಶ್ (45) ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿದ್ದಾರೆಂದು ಎಂದು ಪತ್ನಿ ರೇಖಾ ದೂರು ನೀಡಿದ್ದಾರೆ. ಸತೀಶ್ ಸ್ವಂತ ಅಂಗಡಿ ಹೊಂದಿದ್ದು, ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಜತೆ ಪರಾರಿಯಾಗಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.

ನಾಲ್ಕು ತಿಂಗಳ ಹಿಂದೆಯೇ ಸತೀಶ್ ಪರಾರಿಯಾಗಿದ್ದಾನೆಂದು ಪತ್ನಿ ದೂರು ನೀಡಿದ್ದಾರೆ.ಈ ವೇಳೆ ಮೂರು ವರ್ಷದ ಮಗುವನ್ನೂ ಪತಿ ಕರೆದೊಯ್ದಿದ್ದಾನೆಂದು ಹೇಳಲಾಗಿದೆ.ಮಗು ಇಲ್ಲದೆ ಪತ್ನಿ ಗೋಳಾಡುತ್ತಿದ್ದು, ಪರಸ್ತ್ರಿಯ ಇಬ್ಬರೂ ಮಕ್ಕಳನ್ನೂ ಸತೀಶ್ ಕರೆದೊಯ್ದಿದ್ದಾರೆಂದು ಮಡಿಕೇರಿ ನಗರ ಪೊಲೀಸ್ ಠಾಣೆಗೆ ಪತ್ನಿ ರೇಖಾ ದೂರು ನೀಡಿದ್ದಾರೆ.

ಗಂಡ ಹಾಗೂ ಮಕ್ಕಳನ್ನು ಹುಡುಕಿಕೊಡಿ ಎಂದು ರೇಖಾ ಅಂಗಲಾಚಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣೆ ಪೊಲೀಸರು ಸತೀಶ್​​ನಿಗಾಗಿ ಹುಡುಕಾಟ ನಡೆಸಿದ್ದಾರೆ.

https://www.youtube.com/watch?v=jSafzs4BB_c

Related posts

Madikeri love story: ಮಡಿಕೇರಿ:ಪ್ರಿಯಕರನನ್ನು ಮನೆಗೆ ಕರೆಸಿ ಬಿಸಿ ನೀರು ಎರಚಿದ ಯುವತಿ ಮನೆಯವರು..! ಸಾಧಿಕ್ ಸ್ಥಿತಿ ಗಂಭೀರ..!

ಮಡಿಕೇರಿ:ಸಚಿವರ ಆಪ್ತ ಸಹಾಯಕರ ಸೋಗಿನಲ್ಲಿ ವಂಚನೆ:20 ಸಾವಿರ ರೂ. ಹಣದ ಅವಶ್ಯಕತೆಯಿದೆಯೆಂದು ಪಂಗನಾಮ..! ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?

ಫೆಬ್ರವರಿಯಲ್ಲಿ ವಿಜಯ್‌ ದೇವರಕೊಂಡ , ರಶ್ಮಿಕಾ ಜತೆ ನಿಶ್ಚಿತಾರ್ಥ..!ಕೊನೆಗೂ ಮೌನ ಮುರಿದು ನಟ ಹೇಳಿದ್ದೇನು?