ಬೆಂಗಳೂರು: ವಿವಾಹಿತ ವಕೀಲೆಯೊಬ್ಬರಿಗೆ ಮದುವೆಯಾಗು ಅಂತ ಪ್ರಾಣ ತಿನ್ನುತ್ತಿದ್ದ ವ್ಯಕ್ತಿಯ ವಿರುದ್ಧ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2019 ರಲ್ಲಿ ಫಿಲ್ ಅಂಡ್ ಚಿಲ್ ರೆಸ್ಟೋರೆಂಟ್ ಗೆ ವಕೀಲೆ ಭೇಟಿ ನೀಡಿದ ವೇಳೆ ಪ್ರವೀಣ್ ಕರಮಡ್ಡಿ ಎಂಬಾತ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ. ಯಾವುದೋ ಕೇಸ್ ನಲ್ಲಿ ಸಲಹೆ ಬೇಕೆಂದು ವಕೀಲೆಯ ನಂಬರ್ ಪಡೆದ ಆತ ಮಧ್ಯರಾತ್ರಿಯಲ್ಲಿ ವಕೀಲೆಗೆ ಕರೆ ಮಾಡುತ್ತಿದ್ದ. ತನ್ನನ್ನು ಮದುವೆಯಾಗು ನಿನ್ನ ಗಂಡನಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದೆಲ್ಲ ಹೇಳುತ್ತಿದ್ದ. ಒಪ್ಪದಿದ್ದರೆ ಗಂಡನನ್ನು ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕುತ್ತಿದ್ದ. ಇದರಿಂದ ನೊಂದು ಇದೀಗ ವಕೀಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.