ಕ್ರೀಡೆ/ಸಿನಿಮಾವೈರಲ್ ನ್ಯೂಸ್

10 ವರ್ಷ ಹಿಂದೆಯೇ ತನಗಿಂತ 21 ವರ್ಷ ಹಿರಿಯ ರಾಜಕಾರಣಿಯನ್ನು ಮದುವೆಯಾಗಿದ್ದೆ ಎಂದ ನಟಿ! ಇಷ್ಟು ವರ್ಷ ಮುಚ್ಚಿಟ್ಟಿದ್ದೇಕೆ..?

216

ನ್ಯೂಸ್‌ ನಾಟೌಟ್‌:  ನಟಿ ಸ್ನೇಹಲ್ ರೈ ತಮಗಿಂತ 21 ವರ್ಷದ ರಾಜಕಾರಣಿ ಮಾಧವೇಂದ್ರ ಕುಮಾರ್ ರೈ ಅವರನ್ನು 10 ವರ್ಷ ಹಿಂದೆಯೇ ಮದುವೆಯಾಗಿರುವುದಾಗಿ ಹೇಳಿಕೊಂಡಿರುವುದು ಈಗ ಸುದ್ದಿಯಾಗಿದೆ.

ನಟಿ ವಿವಾಹಿತ ಮಹಿಳೆಯರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ರೆಡಿಯಾಗಿದ್ದಾರೆ. ಹೀಗಾಗಿ ನಟಿ ತಮ್ಮ ಮದುವೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಮುಂದಾಗಿದ್ದಾರೆ. ತನಗಿಂತ 21 ವರ್ಷ ಹಿರಿಯ ರಾಜಕಾರಣಿಯನ್ನು ತಾನು ಮದುವೆಯಾಗಿರುವುದಾಗಿ ನಟಿ ಘೋಷಿಸಿಕೊಂಡಿದ್ದಾರೆ ಮತ್ತು ಈ ಸಂಬಂಧ ಕಿರುತೆರೆ ನಟಿ ಸ್ನೇಹಲ್ ರೈ ಇತ್ತೀಚೆಗಷ್ಟೇ ಸೋಶಿಯಲ್​​ ಮೀಡಿಯಾಗಳಲ್ಲಿ ಫೋಟೋ ಒಂದನ್ನು ಪೋಸ್ಟ್​​​ ಮಾಡಿದ್ದು, ಇದೀಗಾ ಎಲ್ಲೆಡೆ ವೈರಲ್​ ಆಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಸ್ನೇಹಲ್ ರೈ ಮಾತನಾಡಿ, ರಾಜಕಾರಣಿ ಮಾಧವೇಂದ್ರ ಕುಮಾರ್ ರೈ ಅವರನ್ನು 10 ವರ್ಷ ಹಿಂದೆಯೇ ಮದುವೆಯಾಗಿದ್ದೇನೆ. ನಟಿಯಾಗಿ ತಾನು ಮಾಧವೇಂದ್ರ ಹಾಗೂ ಅವರ ಕುಟುಂಬದಿಂದ ಸಾಕಷ್ಟು ಬೆಂಬಲ ಹಾಗೂ ಪ್ರೀತಿಯನ್ನು ಪಡೆಯುತ್ತಿದ್ದೇನೆ ಎಂದು ಸ್ನೇಹಲ್ ರೈ ಬಹಿರಂಗಪಡಿಸಿದ್ದಾರೆ. ಸ್ನೇಹಲ್ ರೈ ಇಷ್ಕ್ ಕಾ ರಂಗ್ ಸಫೇದ್ , ಜನ್ಮೋ ಕಾ ಬಂಧನ್, ಇಚ್ಛಪ್ಯಾರಿ ನಾಗಿನ್, ಪರ್ಫೆಕ್ಟ್ ಪತಿ ಮತ್ತು ವಿಶ್ ನಂತಹ ಟಿವಿ ಶೋಗಳಲ್ಲಿ ನಟಿಸಿ ಸಾಕಷ್ಟು ಜನಮೆಚ್ಚುಗೆ ಪಡೆದುಕೊಂಡಿದ್ದರು.

ಸ್ನೇಹಲ್ ಹಾಗೂ ಮಾಧವೇಂದ್ರ ಅವರು ಮೊದಲವಾರಿಗೆ ಇವೆಂಟ್ ಒಂದರಲ್ಲಿ ಭೇಟಿಯಾದರು. ಅಲ್ಲಿ ನಟಿ ಇವೆಂಟ್ ಹೋಸ್ಟ್ ಮಾಡಿದ್ದು ಮಾಧವೇಂದ್ರ ವಿಐಪಿ ಗೆಸ್ಟ್ ಆಗಿದ್ದರು. ನಂತರ ಫ್ಲೈಟ್​ನಲ್ಲಿ ಮರುದಿನ ಮತ್ತೊಮ್ಮೆ ಭೇಟಿಯಾದರು. ನಂತರ ನಟಿ ಹಲವಾರು ಸಲ ಮಾಧವೇಂದ್ರ ಅವರ ಇವೆಂಟ್ ಮ್ಯಾನೇಜ್​ಮೆಂಟ್ ಕಂಪೆನಿಯ ಹೋಸ್ಟ್ ಆಗಿ ಕೆಲಸ ಮಾಡಿ ನಂತರ ಇಬ್ಬರ ನಡುವಿನ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದೆವು ಎಂದಿದ್ದಾರೆ.

See also  ಕಾಂತಾರ ಫಸ್ಟ್ ಲುಕ್ ರಿಲೀಸ್, ಮೈ ಜುಮ್ ಎನ್ನುವಂತಿದೆ ರಿಷಬ್ ಅವತಾರ, ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget