ಕ್ರೈಂವೈರಲ್ ನ್ಯೂಸ್

‘ಈತ ಮದುವೆಗೆ ಬಂದರೆ ಒದ್ದು ಹೊರ ಹಾಕಿ’ ಎಂದು ಮದುವೆ​​ ಕಾರ್ಡ್​​ನಲ್ಲಿ ಬರೆಸಿದ ಮದುಮಗ..! ಏನಿದು ವೈರಲ್ ಆಮಂತ್ರಣ ಪತ್ರಿಕೆ..?

279

ನ್ಯೂಸ್ ನಾಟೌಟ್‌ : ಮದುವೆ ಆಮಂತ್ರಣ ಪತ್ರಿಕೆ ಕೊಟ್ಟು ಸ್ನೇಹಿತರನ್ನು, ಸಂಬಂಧಿಕರನ್ನು ಮದುವೆಗೆ ಆಹ್ವಾನಿಸುವುದೇ ಕುಟುಂಬಸ್ಥರಿಗೆ ಒಂದು ಸಂಭ್ರಮ. ಆದರೆ ಇದೀಗ ವಿಚಿತ್ರ ಆಮಂತ್ರಣ ಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿರುತ್ತವೆ.

ಉತ್ತರ ಪ್ರದೇಶದ ಇಟಾ ಜಿಲ್ಲೆಯ ಬಿಚ್‌ಪುರಿ ಗ್ರಾಮದ ರೋಹಿತ್ ಮತ್ತು ರಜನಿ ಎಂಬ ಜೋಡಿಯ ವಿವಾಹ ಆಮಂತ್ರಣ ಪ್ರತಿಕೆ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಮಂಟಪ, ಮೂಹೂರ್ತದ ಸಮಯದ ಜೊತೆಗೆ ‘ಸೌರಭ್’ ಎಂಬ ವ್ಯಕ್ತಿಯ ಹೆಸರು ಬರೆಯಲಾಗಿದೆ. ಕೇವಲ ಹೆಸರು ಮಾತ್ರ ಬರೆದಿಲ್ಲ ಈತ ಮದುವೆಗೆ ಬಾರದಂತೆ ಷರತ್ತು ವಿಧಿಸಲಾಗಿದೆ. ಈತ ಮದುವೆಯ ದಿನ ಮಂಟಪದ ಸುತ್ತ ಎಲ್ಲಿಯಾದರೂ ಕಾಣಿಸಿಕೊಂಡರೆ ಒದ್ದು ಹೊರ ಹಾಕಿ ಎಂದು ಕೂಡ ಬರೆಯಲಾಗಿದೆ.

ಅಷ್ಟಕ್ಕೂ ಈ ಆಮಂತ್ರಣ ಪತ್ರಿಕೆ ವೈರಲ್​​​​​ ಆಗಲು ಮುಖ್ಯ ಕಾರಣ ವೆಡ್ಡಿಂಗ್​​ ಕಾರ್ಡ್ ವಿನ್ಯಾಸವಲ್ಲ ಬದಲಾಗಿ, ಅದರಲ್ಲಿ ಬರೆದಿರುವ ಈ ಸಾಲುಗಳೇ ತೀವ್ರ ಚರ್ಚೆಗೆ ಕಾರಣವಾಗಿದೆ.

ಅಲ್ಲದೇ ‘ಸೌರಭ್’ ಎಂಬ ಹೆಸರಿನ ಹಲವಾರು ಮಂದಿ ಸಾಮಾಜಿಕ ಜಾಲತಾಣ ಬಳಕೆದಾರರು ಸಿಟ್ಟಿಗೆದ್ದಿದ್ದಾರೆ. ಅನೇಕ ನೆಟ್ಟಿಗರು “ಬಹುಶ: ಸೌರಭ್ ಎಂಬವರ ಮಾಜಿ ಗೆಳತಿಯನ್ನು ಈತ ಮದುವೆಯಾಗುತ್ತಿರಬಹುದು” ಎಂದು ಹೇಳಿದ್ದಾರೆ.

Click

https://newsnotout.com/2024/10/kerala-cm-pinray-vijayan-car-accid-lkannada-news-viral-video/
https://newsnotout.com/2024/10/kasaragod-150-temple-festival-cracker-issue-kannada-news-kerala/
https://newsnotout.com/2024/10/road-side-momos-food-case-kannada-news-hyderabad/
https://newsnotout.com/2024/10/thief-bank-locker-of-sbi-kannada-news-viral-news-police/
See also  ಕಾಲೇಜಿನಲ್ಲೇ ಯುವಕ-ಯುವತಿಯ ಲವ್ವಿ ಡವ್ವಿ, ವಿಡಿಯೋ ವೈರಲ್ ಪ್ರಕರಣಕ್ಕೆ ಟ್ವಿಸ್ಟ್! ವಿದ್ಯಾರ್ಥಿಗಳಿಬ್ಬರೂ ಆತ್ಮಹತ್ಯೆಗೆ ಶರಣು!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget