ಕ್ರೈಂವಿಡಿಯೋವೈರಲ್ ನ್ಯೂಸ್

ಮದುವೆ ಆರತಕ್ಷತೆ ಸಮಾರಂಭದಲ್ಲಿ ಹೊಡೆದಾಟ..! ಇಲ್ಲಿದೆ ವೈರಲ್ ವಿಡಿಯೋ

151

ನ್ಯೂಸ್ ನಾಟೌಟ್ : ಮದುವೆಯ ನಂತರದ ಅದ್ದೂರಿಯ ಆರತಕ್ಷತೆ ಸಮಾರಂಭದ ವೇಳೆ ವಧು ಮತ್ತು ವರನ ಸಂಬಂಧಿಕರ ನಡುವೆ ಹೊಡೆದಾಟ ನಡೆದಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಆರತಕ್ಷತೆಯ ಸಮಾರಂಭದಲ್ಲಿ ವಧು ಮತ್ತು ವರನ ಸಂಬಂಧಿಗಳು ಕುರ್ಚಿಯನ್ನು ಎತ್ತಿ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ಸಂದರ್ಭದಲ್ಲಿ ಕೆಲವು ಮಹಿಳೆಯರು ಮಧ್ಯಪ್ರವೇಶಿಸಿ ಹೊಡೆದಾಟ ತಪ್ಪಿಸಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಬುದ್ಧಲಾಲ್‌ ಬದ್ಲು ಪ್ರಸಾದ್‌ ಧರ್ಮಶಾಲಾ ಪ್ರದೇಶದ ಅಮೀನಾಬಾದ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಗುಂಬೆ ನವಾಬ್‌ ಪಾರ್ಕ್‌ ಸಮೀಪ ಈ ಹೊಡೆದಾಟ ನಡೆದಿರುವುದಾಗಿ ವರದಿ ವಿವರಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಶುಕ್ರವಾರ (ಫೆ,09) ರಾತ್ರಿ ಆರತಕ್ಷತೆ ಸಮಾರಂಭದಲ್ಲಿ ಡಿಜೆ ಅಬ್ಬರದ ನಡುವೆ ಉಭಯ ಕುಟುಂಬ ಸದಸ್ಯರ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.

ಘಟನೆ ಬಗ್ಗೆ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಧು ಮತ್ತು ವರನ ಸಂಬಂಧಿಕರನ್ನು ಸಮಾಧಾನಪಡಿಸಿ, ನಂತರ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದರು. ಆದರೆ ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ವರದಿ ತಿಳಿಸಿದೆ.

See also  ಸ್ಲೀಪರ್ ಕೋಚ್ ಬಸ್​​ನಲ್ಲಿ ವಿಷ ಸೇವಿಸಿ ನಿದ್ರಿಸಿದ ಪ್ರೇಮಿಗಳು..! ಏನಿದು ವಿಚಿತ್ರ ಪ್ರೇಮ ಕಥೆ?
  Ad Widget   Ad Widget     Ad Widget   Ad Widget   Ad Widget   Ad Widget